

ನವದೆಹಲಿ: ಪ್ರತಿದಿನ ದೆಹಲಿ ಮೆಟ್ರೋದಲ್ಲಿ ಒಂದಲ್ಲ ಒಂದು ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ಘಟನೆಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಜನರು ಕೆಲವೊಮ್ಮೆ ಮೆಟ್ರೋದಲ್ಲಿ ಅಶ್ಲೀಲವಾಗಿ ವರ್ತನೆ ಮಾಡಿದರೆ, ಮತ್ತೆ ಕೆಲವೊಮ್ಮೆ ಜೋಡಿಗಳ ಪ್ರಣಯ ರಿವೀಲ್ ಆಗುತ್ತದೆ. ಈ ಎಲ್ಲ ವಿಡಿಯೋಗಳೂ ಸಾಕಷ್ಟು ಗದ್ದಲ ಗೋಜಲುಗಳಿಂದಲೇ ತುಂಬಿವೆ. ಈ ಘಟನೆಗಳು ನಡೆಯುವಾಗ ಜನರು ಮಾತ್ರ ಅದೆಲ್ಲದರಿಂದ ದೂರವಿರುವುದನ್ನೂ ನೋಡಬಹುದು. ಎರಡು- ಮೂರು ದಿನಗಳ ಹಿಂದೆಯಷ್ಟೇ ದೆಹಲಿ ಮೆಟ್ರೋದ ವಿಡಿಯೋ ವೈರಲ್ ಆಗಿತ್ತು. ಇದರಲ್ಲಿ ಜೋಡಿಯೊಂದು ಮೆಟ್ರೋದಲ್ಲಿ ಕುಳಿತಿರುವ ಇಬ್ಬರು ಆಂಟಿಯರೊಂದಿಗೆ ಜಗಳವಾಡುತ್ತಿರುವುದನ್ನು ಕಾಣಬಹುದು. ಇದೀಗ ಮತ್ತೊಮ್ಮೆ ದೆಹಲಿ ಮೆಟ್ರೋದ ವಿಡಿಯೋ ಹೆಚ್ಚು ವೈರಲ್ ಆಗಿದೆ. ಇದನ್ನು ನೋಡಿದ ನಂತರ ನೀವು ದೆಹಲಿ ಮೆಟ್ರೋದಲ್ಲಿ ಏನಾಗುತ್ತಿದೆ ಎಂದು ಯೋಚಿಸಲು ಪ್ರಾರಂಭಿಸುತ್ತೀರಿ?.
ವೈರಲ್ ಆಗಿರುವ ಈ ವಿಡಿಯೋದಲ್ಲಿ ಇಬ್ಬರು ಯುವಕರು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ಜನರಿಂದ ಕಿಕ್ಕಿರಿದು ತುಂಬಿರುವ ಮೆಟ್ರೋದಲ್ಲಿ ಯುವಕರು ಪರಸ್ಪರ ಒದ್ದು, ಗುದ್ದಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಸುತ್ತಲಿನವರು ಜಗಳ ಬಿಡಿಸಲು ಯತ್ನಿಸುತ್ತಿದ್ದಾರೆ. ಇದಾದ ನಂತರ ಜಗಳವಾಡುತ್ತಿದ್ದ ಒಬ್ಬ ವ್ಯಕ್ತಿ ಮೆಟ್ರೋದಿಂದ ಇಳಿದು ಹೊರಗೆ ಹೋಗುತ್ತಾನೆ. ಆಗ ಜಗಳ ಕಡಿಮೆಯಾಗುತ್ತದೆ. ಮಾಹಿತಿಯ ಪ್ರಕಾರ, ರಾಜ ನಗರ ಸಿಂಗ್ ಮೆಟ್ರೋ ನಿಲ್ದಾಣದಿಂದ ಕಾಶ್ಮೀರ್ ಗೇಟ್ವರೆಗೆ ಮೆಟ್ರೋ ಸಾಗುವಾಗ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಪರಸ್ಪರ ಬಡಿದಾಡಿಕೊಂಡ ಯುವಕರು
ಈ ವೀಡಿಯೊವನ್ನು @sbgreen17 ಹೆಸರಿನ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, "ನೇರಳೆ ಬಣ್ಣದ ಮಾರ್ಗದಲ್ಲಿ ಮೆಟ್ರೋದೊಳಗೆ ಇಬ್ಬರೂ ಜಗಳವಾಡಿದ್ದಾರೆ" ಎಂದು ಬರೆದುಕೊಂಡಿದ್ದಾರೆ. ಸಾವಿರಾರು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದು, ಇಬ್ಬರನ್ನೂ ತೀವ್ರವಾಗಿ ಖಂಡಿಸಲಾಗಿದೆ. ವಿಡಿಯೋ ನೋಡಿದ ಅನೇಕರು ಇದು ನಾಚಿಕೆಗೇಡಿನ ಸಂಗತಿ ಎಂದರೆ, ಮತ್ತೆ ಕೆಲವರು ಜಗಳವಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ, ಇನ್ನು ಸ್ವಲ್ಪ ಮಂದಿ ದೆಹಲಿ ಮೆಟ್ರೋದಲ್ಲಿ ಇದು ಪ್ರತಿನಿತ್ಯ ನಡೆಯುತ್ತದೆ ಎಂದು ಬರೆದುಕೊಂಡಿದ್ದಾರೆ.
ವೈರಲ್ ಆಯ್ತು ವಿಡಿಯೋ