ಗಬ್ಬುನಾರುತ್ತಿರುವ ಚರಂಡಿಯಲ್ಲಿ ಹುಡುಗರಿಬ್ಬರ ಫೈಟ್​​; ಮಧ್ಯಪ್ರವೇಶಿಸಿದ ಮೂರನೇ ವ್ಯಕ್ತಿ ಮಾಡಿದ್ದೇನು ನೀವೇ ನೋಡಿ | Viral Video

Untitled design - 2024-10-27T203214.608
Published on

ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಯಾರೊಂದಿಗಾದರೂ ಮಾಡಬಹುದಾದ ಏಕೈಕ ವಿಷಯವೆಂದರೆ ಅದು ಜಗಳ. ಅದೇ ಜಗಳವನ್ನು ಗಬ್ಬು ನಾರುವ ಚರಂಡಿಯೊಳಗೆ ಆಡಿದರೆ, ಒಮ್ಮೆ ಊಹೆ ಮಾಡಿ ನೋಡಿದರೆ ಸಾಕು ಜೀವನದ ಮೇಲೆ ಜಿಗುಪ್ಸೆ ಉಂಟಾಗುವುದಂತೂ ಸುಳ್ಳಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹುಡುಗರಿಬ್ಬರು ಚರಂಡಿಯೊಳಗೆ ಜಗಳವಾಡುತ್ತಿರುವ ವಿಡಿಯೋವೊಂದ ಹರಿದಾಡುತ್ತಿದೆ(Viral Video).

ವೈರಲ್​ ವಿಡಿಯೋದಲ್ಲಿ ಇಬ್ಬರು ಹುಡುಗರು ಚರಂಡಿಯೊಳಗೆ ಒಬ್ಬರನ್ನೊಬ್ಬರು ತೀವ್ರವಾಗಿ ಹೊಡೆಯುವುದನ್ನು ಕಾಣಬಹುದು. ಕೊಳಕು ಚರಂಡಿಯಲ್ಲಿ ಹೊಡೆದಾಟ ಮಾಡುತ್ತಿರುವುದರಿಂದ ಇಬ್ಬರ ದೇಹವೂ ಕಪ್ಪು ಬಣ್ಣವಾಗಿದೆ. ಇಬ್ಬರ ನಡುವೆ ಫೈಟ್​​ ಮಧ್ಯೆ 15 ಸೆಕೆಂಡುಗಳ ನಂತರ ಮೂರನೇ ವ್ಯಕ್ತಿ ಪ್ರವೇಶಿಸುತ್ತಾರೆ. ಪೊರಕೆ ತರಹ ಒಂದು ವಸ್ತುವನ್ನು ತಂದಿದ್ದ ಆ ವ್ಯಕ್ತಿ ಇಬ್ಬರಿಗೂ ಅದರಲ್ಲೇ ಹೊಡೆಯುವುದನ್ನು ನೋಡಬಹುದು. ನಂತರ ಇಬ್ಬರು ಹುಡುಗರು ಚರಂಡಿಯಿಂದ ಹೊರಬಂದರು. ಆದರೆ ಮತ್ತೊಬ್ಬ ವ್ಯಕ್ತಿ ದೊಣ್ಣೆಯಿಂದ ಹೊಡೆಯುತ್ತಿರುವುದು ವಿಡಿಯೋ ಕೊನೆಯಲ್ಲಿ ಕಾಣಿಸುತ್ತಿದೆ.

28 ಸೆಕೆಂಡ್ ಇರುವ ಈ ಕ್ಲಿಪ್​​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಹಲವರು ಪ್ರತಿಕ್ರಿಯಿಸಿದ್ದಾರೆ. ಅತಿಯಾದ ನಶೆಯಲ್ಲಿ ಜಗಳವಾಡುತ್ತಿದ್ದಾರೆ, ಜಗಳ ಚರಂಡಿಗೆ ತಲುಪಿದ್ದರೆ ವಿಷಯ ಮಿತಿಮೀರಿದೆ, ಹುಡುಗರು ಮಾತ್ರ ಈ ರೀತಿ ಜಗಳವಾಡುತ್ತಾರೆ, ವಾಹ್.. ನೀವು ಹೋರಾಡಲು ಯಾವ ಸ್ಥಳವನ್ನು ಆರಿಸಿದ್ದೀರಿ, ಮೊದಲು ಇವರಿಗೆ ಸ್ನಾನ ಮಾಡಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ., (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net