

ಯಾವುದೇ ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡಿದರೆ ಅದರ ಹೊರೆ ನಮ್ಮ ಮೇಲೆಯೇ ಎಂಬುದು ಎಷ್ಟೋ ಮಂದಿಗೆ ತಿಳಿದಿಲ್ಲ. ಭಾರತೀಯ ರೈಲ್ವೆಯು ಸಾರ್ವಜನಿಕ ಆಸ್ತಿಯಾಗಿದೆ. ಅದನ್ನು ಹಾನಿಗೊಳಿಸುವುದರಿಂದ ರೈಲ್ವೆಗೆ ಹಾನಿಯಾಗುವುದಿಲ್ಲ ಬದಲಾಗಿ ಪ್ರತಿಯೊಬ್ಬ ಸಾಮಾನ್ಯನ ತೆರಿಗೆ ಹಣವೂ ವ್ಯರ್ಥವಾಗುತ್ತದೆ. ಸದ್ಯ ಇದಕ್ಕಿ ಪೂರಕ ಎಂಬಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ಚಲಿಸುತ್ತಿರುವ ರೈಲಿನಲ್ಲಿ ಖಾಲಿ ಇರುವ ಜನರಲ್ ಬೋಗಿಯಲ್ಲಿ ವ್ಯಕ್ತಿಯೊಬ್ಬ ಸೀಟನ್ನು ಹರಿದು ಹಾಕುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿಯು ಮೊದಲು ಆಸನವನ್ನು ನಾಶಪಡಿಸುತ್ತಾನೆ. ನಂತರ ಅವನು ಮೇಲಿನ ಸೀಟಿನ ಮೇಲೆ ಜೋಡಿಸಲಾದ ಕಬ್ಬಿಣವನ್ನು ತೆಗೆದುಕೊಂಡು ಕಿಟಕಿಯ ಮೂಲಕ ಹೊರಗೆ ಎಸೆಯುವುದನ್ನು ನೋಡಬಹುದು. ಇದನ್ನು ಮಾಡುವಾಗ ಅವನು ತುಂಬಾ ಸಂತೋಷವಾಗಿಯೂ ಕಾಣುತ್ತಾನೆ. ಆದರೆ ವೀಡಿಯೊವನ್ನು ವೀಕ್ಷಿಸಿದ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಈ ವಿಡಿಯೋವನ್ನು ಇದುವರೆಗೂ 4.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಕೆಲವರಿ ಪ್ರತಿಕ್ರಿಯಿಸಿದ್ದಾರೆ. ಅವನಿಗೆ ಹುಚ್ಚು ಇರಬೇಕು, ಅವನಿಗೂ ಸರಿಯಾದ ಶಿಕ್ಷೆಯನ್ನು ನೀಡಿ ಅದು ಇತರರಿಗೂ ಉದಾಹರಣೆಯಾಗಬೇಕು, ಪೊಲೀಸರು ಕೂಡ ಹೀಗೆಯೇ ಅವನ ಬಟ್ಟೆ ಹರಿದು ಜೈಲಿಗೆ ಹಾಕಬೇಕು, ಜೈಲಿನಲ್ಲಿ ಅವರಿಗೆ ಮೂರನೇ ದರ್ಜೆಯ ಚಿಕಿತ್ಸೆ ನೀಡಬೇಕು, ಜೈಲಿನಲ್ಲಿ ಅವನಿಗೆ ನೀಡುವ ಶಿಕ್ಷೆಯ ಲೈವ್ ಸ್ಟ್ರೀಮ್ ಮಾಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ.