

ಇಸ್ಲಾಮಾಬಾದ್: ಶೈಕ್ಷಣಿಕ ಜೀವನದಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಮೋಜು ಮಸ್ತಿ ಮಾಡುವುದು ಸಹಜ. ಆದರೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರ ವಹಿಸಬೇಕಾಗಿರುವುದು ಮುಖ್ಯವಾಗುತ್ತದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿರುವ ವಿಡಿಯೋ ಹುಡುಗರ ಅಪಾಯಕಾರಿ ಸ್ಟಂಟ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ವೈರಲ್ ವಿಡಿಯೋದಲ್ಲಿ ಇಬ್ಬರು ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ ಹಿಂದಿನಿಂದ ಬಂದು ಮುಂದಿರುವ ಮತ್ತೊಬ್ಬ ವಿದ್ಯಾರ್ಥಿಯ ಕುತ್ತಿಗೆ ಬಳಿಗೆ ತಮ್ಮ ಕೈಗಳನ್ನು ಹಾಕಿ ಅವನನ್ನು ಸಂಪೂರ್ಣವಾಗಿ ತಿರುಗಿಸುವುದನ್ನು ನೋಡಬಹುದು. ಈ ವಿಡಿಯೋದಲ್ಲಿ ಬಲಿಪಶುವಂತೆ ಅವರು ಕೈಗೆ ಸಿಕ್ಕ ವಿದ್ಯಾರ್ಥಿಗಳು ಈ ಸ್ಟಂಟ್ ಮಾಡುವ ವೇಳೆ ಮತ್ತೆ ಎದ್ದು ನಿಲ್ಲುವ ಬದಲು ನೆಲದ ಮೇಲೆ ಬೀಳುವುದನ್ನು ಕಾಣಬಹುದು.
ಈ ವಿಡಿಯೋ ಪಾಕಿಸ್ತಾನದ ಲಾಹೋರ್‌ನಲ್ಲಿರುವ ಸುಪೀರಿಯರ್ ವಿಶ್ವವಿದ್ಯಾನಿಲಯದಿಂದ ಬಂದಿದೆ ಎನ್ನಲಾಗಿದೆ. ಸುಮಾರು 31 ಸೆಕೆಂಡ್ ಇರುವ ಈ ವಿಡಿಯೋವನ್ನು ಇದುವರೆಗೂ 5 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 29 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಹಲವರು ಟೀಕಿಸಿದ್ದಾರೆ.
ಇದು ಯಾವ ಅಜ್ಞಾನ? ನೀನು ಮಾಡುತ್ತಿರುವುದು ತಮಾಷೆಯಲ್ಲ ಮಾರಕ, ಈ ಸಾಹಸದಿಂದ ನೀವು ಬೇರೆಯವರ ಬೆನ್ನುಮೂಳೆಯನ್ನು ಮುರಿಯಬಹುದು, ಯಾರಾದರೂ ನನಗೆ ಹೀಗೆ ಮಾಡಿದ್ದರೆ ಅವನು ಸ್ವರ್ಗದಲ್ಲಿರುತ್ತಿದ್ದ ನಾನು ಜೈಲಿನಲ್ಲಿರುತ್ತಿದ್ದೆ, ಕಾಲೇಜಿನಲ್ಲಿ ಅಪ್ಪಿತಪ್ಪಿಯೂ ಇಂತಹ ಮೋಜು ಮಸ್ತಿ ಮಾಡಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ.(ಏಜೆನ್ಸೀಸ್)