ಪಾಕಿಸ್ತಾನಿ ಟೀಮ್​​ ವಿಶ್ವದ ಬಲಿಷ್ಠ ಕ್ರಿಕೆಟ್ ತಂಡ; ಪಠ್ಯದಲ್ಲಿನ ಮಾಹಿತಿ ನೋಡಿ ಪಾಕ್​​ ಹುಡುಗನಿಗೆ ಶಾಕ್​ | Viral Video

Untitled design (20)
Published on

ದುಬೈನಲ್ಲಿ ಫೆಬ್ರವರಿ 23, 2025ರಂದು ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು. ಪಾಕಿಸ್ತಾನ 241 ರನ್‌ಗಳಿಗೆ ಆಲೌಟ್ ಆದರೆ ಭಾರತ 42.3 ಓವರ್‌ಗಳಲ್ಲಿ ಗುರಿ ತಲುಪಿತು. ಈ ಪಂದ್ಯದ ನಂತರ ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ಮೀಮ್‌ಗಳು ವೈರಲ್ (Viral Video)​ ಆಗಿದ್ದವು. ಏತನ್ಮಧ್ಯೆ ವಿಶೇಷ ವಿಡಿಯೋವೊಂದು ನೆಟ್ಟಿಗರು ನಗುವಂತೆ ಮಾಡಿದೆ.

ವೈರಲ್​ ವಿಡಿಯೋದಲ್ಲಿ ಪಾಕಿಸ್ತಾನಿ ಯುವಕನೊಬ್ಬ 12ನೇ ತರಗತಿಯ 'ಪಾಕಿಸ್ತಾನ್ ಸ್ಟಡೀಸ್' ಪುಸ್ತಕದ ಆಯ್ದ ಭಾಗವನ್ನು ತೋರಿಸುತ್ತಿರುವುದನ್ನು ನೋಡಬಹುದು. ಅಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಪುಸ್ತಕದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ ಎಂದು ಬರೆಯಲಾಗಿದೆ. ಇದನ್ನು ಓದಿದ ನಂತರ ಆ ಯುವಕ ಆಘಾತಕ್ಕೊಳಗಾಗುವುದು ವಿಡಿಯೋದಲ್ಲಿಯೂ ಗೋಚರಿಸುತ್ತದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಪಾಕಿಸ್ತಾನದಲ್ಲಿ 12ನೇ ತರಗತಿಯವರೆಗೆ ಮಕ್ಕಳಿಗೆ ಕಾಲ್ಪನಿಕ ಕಥೆಗಳನ್ನು ಕಲಿಸಲಾಗುತ್ತದೆ, ಈ ಪುಸ್ತಕದಲ್ಲಿ ಪಾಕಿಸ್ತಾನಿ ಸೈನ್ಯವನ್ನು ಅತ್ಯಂತ ಶಕ್ತಿಶಾಲಿ ಎಂದು ವಿವರಿಸಲಾಗಿದೆ, ಈ ಪುಸ್ತಕವನ್ನು ಬಹುಶಃ 1992ರ ನಂತರ ನವೀಕರಿಸಲಾಗಿಲ್ಲ ಅದಕ್ಕಾಗಿಯೇ ಪಾಕಿಸ್ತಾನಿ ಮಕ್ಕಳು ಇನ್ನೂ ಹಳೆಯ ಪಠ್ಯಕ್ರಮವನ್ನು ಅಧ್ಯಯನ ಮಾಡುತ್ತಿದ್ದಾರೆ ಎಂದು ಕಾಮೆಂಟ್​ ಮಾಡಿದ್ದಾರೆ. ಅಲ್ಲದೆ ಈ ವಿಡಿಯೋಗೆ ಭಾರತೀಯರಿಗಿಂತ ಹೆಚ್ಚಿನ ಪಾಕಿಸ್ತಾನಿಗಳು ಪ್ರತಿಕ್ರಿಯಿಸಿದ್ದಾರೆ. ಇದನ್ನು ನೋಡಿದರೆ ಪಾಕಿಸ್ತಾನದ ಅನೇಕರು ಈ ಪುಸ್ತಕದ ವಿಷಯಗಳನ್ನು ಒಪ್ಪುವುದಿಲ್ಲ ಎಂದು ತೋರಿಸುತ್ತದೆ. ವಾಸ್ತವವಾಗಿ ಆಸ್ಟ್ರೇಲಿಯಾ ವಿಶ್ವದ ಅತ್ಯುತ್ತಮ ಕ್ರಿಕೆಟ್​ ತಂಡ.(ಏಜೆನ್ಸೀಸ್​​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net