

ವೈರಲ್ ಆಗಲು ಇಚ್ಛಿಸುವವರು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ಗಳನ್ನು ಅಪ್ಲೋಡ್ ಮಾಡುತ್ತಾರೆ. ಹೀಗೆ ರೀಲ್ಸ್ ಗೀಳಿರುವವರು ಮಾತ್ರವಲ್ಲದೆ ವಿಭಿನ್ನವಾಗಿ ತಾವು ಫೇಮಸ್ ಆಗಲೇಂದು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವವರು ಇರುತ್ತಾರೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ವಿಭಿನ್ನವಾದ ವಿಡಿಯೋಗಳನ್ನು ನೀವು ಜಾಲತಾಣದಲ್ಲಿ ನೋಡಿರುತ್ತೀರಿ. ಆದರೆ ಸದ್ಯ ವೈರಲ್ ಆಗುತ್ತಿರುವ ವಿಡಿಯೋವೊಂದು(Viral Video) ಚರ್ಚೆಗೆ ಗ್ರಾಸವಾಗಿದೆ.
ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಜೀವಂತವಾಗಿರುವ ದೊಡ್ಡ ಮೀನನ್ನು ಕೈಯಲ್ಲಿ ಹಿಡಿದಿರುವುದನ್ನು ಕಾಣಬಹುದು. ಆ ವ್ಯಕ್ತಿ ಮೀನನ್ನು ಇನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತಾನೆ. ನಂತರ ಅವನು ಬಿಯರ್ ಬಾಟಲಿಯನ್ನು ಮೀನಿನ ಬಾಯಿಗೆ ಕಡೆಗೆ ತಿರುಗಿಸುತ್ತಾನೆ. ಬಳಿಕ ಬಿಯರ್ ಅನ್ನು ಮೀನಿಗೆ ಕುಡಿಸುವುದನ್ನು ನೋಡಬಹುದು. ಆ ವ್ಯಕ್ತಿಯ ಪಕ್ಕದಲ್ಲಿ ಮತ್ತೊಬ್ಬ ವ್ಯಕ್ತಿ ಬಂದು ನಿಲ್ಲುತ್ತಾನೆ. ಇಲ್ಲಿಗೆ ಆ ವಿಡಿಯೋ ಕೊನೆಗೊಳ್ಳುತ್ತದೆ.
ಈ ವೈರಲ್ ವಿಡಿಯೋ ನೋಡಿ ಅನೇಕರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಮೀನನ್ನು 'ಕಿಂಗ್ಫಿಷರ್' ಎಂದು ಹೇಳುತ್ತಾ ತಮಾಷೆ ಮಾಡಿದರೆ, ಮತ್ತೆ ಕೆಲವರು ಈ ಕೃತ್ಯವನ್ನು ಪ್ರಾಣಿಗಳ ಮೇಲಿನ ದೌರ್ಜನ್ಯ ಎಂದು ಟೀಕಿಸಿದ್ದಾರೆ. ಇದು ತಮಾಷೆಯಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ‘ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್’ (PETA)ಗೆ ವಿಡಿಯೋವನ್ನು ಟ್ಯಾಗ್ ಮಾಡುವ ಮೂಲಕ ಪ್ರಾಣಿ ಹಿಂಸೆ ಎಂದು ಅವರು ಭಾವಿಸುವುದರ ವಿರುದ್ಧ ಕ್ರಮಕೈಗೊಳ್ಳುವಂತೆ ಸಂಸ್ಥೆಯನ್ನು ಒತ್ತಾಯಿಸಿದ್ದಾರೆ.