ಅಪ್ಪಿತಪ್ಪಿ ನೀರು ಮೂಗಿನೊಳಗೆ ಹೋದರೆ ಸಾಕು ಒಂದು ನಿಮಿಷ ವಿಲವಿಲ ಎಂದು ಒದ್ದಾಡುವ ಜನರ ಪೈಕಿ ಇಲ್ಲೊಬ್ಬ ಭೂಪ, ಮದ್ಯವನ್ನೇ ಮೂಗಿನಿಂದ ಕುಡಿದಿದ್ದಾನೆ. ಇದು ನೋಡುಗರ ಅಚ್ಚರಿಗೆ ಕಾರಣವಾಗಿದೆ. ಕುಡುಕನು ಬಹಳ ಉತ್ಸಾಹದಿಂದ ಮದ್ಯಪಾನ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಮೊದಲು ಕೈಯಲ್ಲಿ ದೊಡ್ಡ ಬಿಯರ್ ಗ್ಲಾಸ್ ಹಿಡಿದು, ಯಾವುದೋ ದೇವರಿಗೆ ಬುದ್ಧಿ ಬಂದಂತೆ ಎರಡು ಮೂರು ಬಾರಿ ಹಿಂದೆ- ಮುಂದೆ ತಿರುಗಿಸಿ, ಬಳಿಕ ಗ್ಲಾಸ್‌ನಲ್ಲಿದ್ದ ಬಿಯರ್ ಅನ್ನು ಮೂಗಿಗೆ ತಂದು, ಅದನ್ನು ಕೆಳಗಿಡದೆ ಒಂದೇ ಸಲ ಕುಡಿದು ಮುಗಿಸುತ್ತಾನೆ.