Viral Video | ಚಿಂದಿ ಆಯುವ ತಂದೆಯಿಂದ ಮಗನಿಗೆ ಐಫೋನ್​ ಗಿಫ್ಟ್​​; ಡ್ಯಾಡ್ ಆಫ್​ ದಿ ಇಯರ್​​ ಎಂದ ನೆಟ್ಟಿಗರು

Untitled-design-2024-09-29T162938.446
Published on

ಮಗ ಬೋರ್ಡ್​ ಎಕ್ಸಾಂನಲ್ಲಿ ಉತ್ತಮ ಫಲಿತಾಂಶ ಪಡೆದ ಖುಷಿಯಿಂದಾಗಿ ಚಿಂದಿ ಆಯುವ ತಂದೆ ನೀಡಿರುವ ಉಡುಗೊರೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಲೆಟೆಸ್ಟ್​ ಟ್ರೆಂಡ್​ ಆಗಿದೆ. ಫಾದರ್​ ಆಫ್​ ದಿ ಇಯರ್​ ಎಂದು ಬಿರುದು ನೀಡುವ ಮೂಲಕ ಗೌರವಿಸಲಾಗಿದೆ. ಆದರೆ ವೈರಲ್​ ಆಗಿರುವ ವಿಡಿಯೋ(Viral Video)ದ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ.

ವೈರಲ್​ ವಿಡಿಯೋದಲ್ಲಿ ಚಿಂದಿ ಆಯುವ ವ್ಯಕ್ತಿಯು ಐಫೋನ್​ ಹಿಡಿದಿರುವುದನ್ನ ಕಾಣಬಹುದಾಗಿದೆ. ಆತ ಜನರೊಂದಿಗೆ ಮಾತನಾಡುತ್ತ ಹೆಮ್ಮೆಯಿಂದ ಸಂಭ್ರಮಿಸುತ್ತಿರುವುದನ್ನು ನೋಡಬಹುದು. ಆದರೆ ಮಗನ ಸಾಧನೆಯನ್ನು ಮೆಚ್ಚುತ್ತಾ ಮಾತನಾಡುತ ತಂದೆಯ ಮಾತುಗಳು ಸಂಪೂರ್ಣವಾಗಿ ಅರ್ಥವಾಗುವುದಿಲ್ಲ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಅನೇಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಮಗನಿಗೆ 1.5 ಲಕ್ಷ ರೂಪಾಯಿ ಮೌಲ್ಯದ ಐಫೋನ್ 16 ಅನ್ನು ಉಡುಗೊರೆಯಾಗಿ ನೀಡಿ, ತಾನು 85,000 ರೂಪಾಯಿ ಮೌಲ್ಯದ ಐಫೋನ್​ ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. 'ಘರ್ ಕೆ ಕಲಾಶ್' ಹೆಸರಿನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಶೇರ್​ ಮಾಡಲಾಗಿರುವ ಈ ವಿಡಿಯೋದ ಮೂಲವನ್ನು ಇನ್ನು ದೃಢೀಕರಿಸಲಾಗಿಲ್ಲ.

ವಿಡಿಯೋ ವೈರಲ್​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ತನ್ನ ಮಗ ಬೋರ್ಡ್‌ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿರುವುದಕ್ಕೆ ನೀಡಿರುವ ಗಿಫ್ಟ್​ ಐಫೋನ್ನ ಬೆಲೆ​ಗಿಂತ ಆತನ ತಂದೆಯ ನಗುವೆ ಹೆಚ್ಚು ಮೌಲ್ಯವಾಗಿದೆ. ಈ ವ್ಯಕ್ತಿಯ ಎಲ್ಲಾ ಹಣವನ್ನು ಇಲ್ಲಿ ಖರ್ಚು ಮಾಡಲಾಗಿದೆ ಎಂದು ಕೆಲವರು ಕಾಮೆಂಟ್​ ಮಾಡಿದ್ದರೆ. ಅವನ ತಂದೆಯಿಂದ ಮಗನಿಗೆ ಮಿಲಿಯನ್ ಡಾಲರ್ ಉಡುಗೊರೆ ಎಂದು ಕೂಡ ಟೀಕಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net