ರಕ್ಷಿಸಿದ ಬಳಿಕ ಬೋನಿಗೆ ಹಾಕಿದ ಚಿರತೆ ಮಾಡಿದ್ದೇನು ಗೊತ್ತಾ; ಈ Viral Video ನೋಡಿ ಇಷ್ಟ ಪಡದವರೇ ಇಲ್ಲ

Untitled design (57)
Published on

ಕಾಡಿನ ಪ್ರಪಂಚವು ಕಡಿಮೆ ವಿಶಿಷ್ಟವಲ್ಲ. ಅನೇಕ ಕಾಡು ಪ್ರಾಣಿಗಳನ್ನು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ ಮತ್ತು ಅವು ಮನುಷ್ಯರೊಂದಿಗೆ ಭಿನ್ನವಾಗಿರುತ್ತವೆ. ಆದರೆ ಕೆಲವೊಮ್ಮೆ ನರಭಕ್ಷಕ ಪ್ರಾಣಿಗಳು ಎಂದು ಹೇಳುವ ಸಿಂಹ, ಹುಲಿ, ಚಿರತೆಗಳು ಕೂಡ ಮನುಷ್ಯರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುತ್ತವೆ. ಅಂತಹ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೇವೆ. ಸದ್ಯ ಅಂತಹದ್ದೇ ವಿಡಿಯೋವೊಂದು ವೈರಲ್(Viral Video)​ ಆಗುತ್ತಿದೆ.

ವೈರಲ್​ ವಿಡಿಯೋದಲ್ಲಿ ರಕ್ಷಿಸಿರುವ ಚಿರತೆಯನ್ನು ಬೋನಿನಲ್ಲಿ ಇರಿಸಲಾಗಿರುವುದನ್ನು ನೋಡಬಹುದು. ಚಿರತೆ ಯಾವುದೇ ಸಮಸ್ಯೆ ಇಲ್ಲದೆ ಆರಾಮಾಗಿ ಎಂಬುದನ್ನು ನೋಡಲು ವ್ಯಕ್ತಿಯೊಬ್ಬರು ಕೈಯನ್ನು ಬೋನಿನೊಳಗೆ ಹಾಕಿ ಚಿರತೆಯ ತಲೆಯನ್ನು ಸವರುತ್ತಾರೆ. ಹಾಗೆಯೇ ಅವರು ತಮ್ಮ ಕೈಯನ್ನು ಸ್ವಲ್ಪ ಕೆಳಭಾಗಕ್ಕೆ ತೆಗೆದುಕೊಂಡಾಗ ಚಿರತೆಯು ಆ ವ್ಯಕ್ತಿಯ ಕೈಯನ್ನು ಹಿಡಿದು ತನ್ನ ತಲೆ ಭಾಗಕ್ಕೆ ಇಡುವುದನ್ನು ಕಾಣಬಹುದು.

ಚಿರತೆಯ ತಲೆಯನ್ನು ವ್ಯಕ್ತಿಯೂ ಸವರುವಾಗ ಆ ಪ್ರಾಣಿ ಎಷ್ಟು ಸಂತೋಷ ಪಡುತ್ತದೆ. ಮತ್ತು ಪದೇ ಪದೆ ಆ ವ್ಯಕ್ತಿಯ ಕೈಯನ್ನು ಹಿಡಿದು ತನ್ನ ತಲೆ ಮೇಲೆ ಹೊತ್ತುಕೊಳ್ಳುವುದನ್ನು ನೊಡಬಹುದು.

ಈ ವಿಡಿಯೋವನ್ನು ಇದುವರೆಗೂ 1.1 ಮಿಲಿಯನ್​​ ಮಂದಿ ವೀಕ್ಷಿಸಿದ್ದು ಹಲವರು ಪ್ರತಿಕ್ರಿಯಿಸಿದ್ದಾರೆ. ದೊಡ್ಡ ಬೆಕ್ಕು ಇದನ್ನು ಬಹಳಷ್ಟು ಇಷ್ಟಪಡುತ್ತಿದೆ, ಇದು ತುಂಬಾ ಸುಂದರವಾದ ವಿಡಿಯೋ, ಪ್ರಾಣಿಗಳಿಗೂ ಪ್ರೀತಿ ಬೇಕು, ಇದು ಚಿರತೆಗೆ ದೊಡ್ಡ ಸಂತೋಷವಾಗಿದೆ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net