ಕಾಡಿನ ರಾಜ ಸಿಂಹವು ಪ್ರತಿ ಬಾರಿ ಬೇಟೆಯಾಡುವುದನ್ನು ನೋಡಿರುತ್ತೀರಿ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್(Viral Video) ಆಗುತ್ತಿದೆ. ವಿಡಿಯೋದಲ್ಲಿ ಸಿಂಹವನ್ನೇ ಮತ್ತೊಂದು ಕಾಡಿನ ಪ್ರಾಣಿ ಅಟ್ಟಾಡಿಸುತ್ತಿದೆ. ಕಾಡು ಎಮ್ಮೆಯನ್ನು ಬೇಟೆಯಾಡುವ ಉದ್ದೇಶದಿಂದ ಅದರ ಮೇಲೆ ಧಾವಿಸಿದ ಸಿಂಹವು ಕಾಡು ಎಮ್ಮೆಯ ಬಲೆಗೆ ಬಿದ್ದಿದೆ.
ಇದನ್ನು ಓದಿ: ಬಾಡಿ ಶೇಮರ್‌ಗಳಿಗೆ ಖಡಕ್ ಉತ್ತರ ಕೊಟ್ಟ ಕಂಟೆಂಟ್ ಕ್ರಿಯೇಟರ್; Viral Video ನೋಡಿ ವಾವ್ ಎಂದ ನೆಟ್ಟಿಗರು
ಶಕ್ತಿಶಾಲಿ ಪ್ರಾಣಿಗಳಲ್ಲಿ ಕಾಡು ಎಮ್ಮೆ ಕೂಡ ಸೇರುತ್ತದೆ. ಈ ಪ್ರಾಣಿ ಜ್ಞಾಪಕಶಕ್ತಿಯ ದೃಷ್ಟಿಯಿಂದಲೂ ಬಹಳ ತೀಕ್ಷ್ಣವಾಗಿರುತ್ತವೆ. ಮಾಹಿತಿಯ ಪ್ರಕಾರ, ಅದರ ಮೇಲೆ ಯಾರು ದಾಳಿ ಮಾಡಿದ್ದಾರೆಂದು ಯಾವಾಗಲೂ ನೆನಪಿಸಿಕೊಳ್ಳುತ್ತದೆ. ಸಮಯ ಸಿಕ್ಕಾಗೆಲ್ಲಾ ಸಿಂಹ ಮತ್ತು ಅದರ ಮರಿಗಳ ಮೇಲೆ ಸೇಡು ತೀರಿಸಿಕೊಳ್ಳುತ್ತದೆ. ವೈರಲ್ ಆಗಿರುವ ವಿಡಿಯೋದಲ್ಲಿ ಕಾಡೆಮ್ಮೆಯೊಂದು ಸಿಂಹದ ಮೇಲೆ ಕೆಟ್ಟದಾಗಿ ದಾಳಿ ಮಾಡಿದೆ.
ವೈರಲ್ ವಿಡಿಯೋದಲ್ಲಿ ಕಾಡು ಎಮ್ಮೆ ಸಿಂಹವನ್ನು ನೆಲಕ್ಕೆ ಬಡಿದು ಅದರ ಮೇಲೆ ದಾಳಿ ಮಾಡುತ್ತಿರುವುದನ್ನು ನೋಡಬಹುದು. ಬೇಟೆಗಾರನನ್ನು ಹುಡುಕುತ್ತಾ ಅಲೆದಾಡಿದ ದಾಳಿ ಮಾಡಲು ಹೋಗಿದ ಸಿಂಹವು ಕಾಡು ಎಮ್ಮೆ ಶಕ್ತಿಗೆ ಬಲಿಯಾಗುತ್ತದೆ. ನಂತರ ಅಲ್ಲಿಂದ ಮೇಲೇಳುವುದೂ ಕಷ್ಟವಾಗುತ್ತದೆ. ಕಾಡುಎಮ್ಮೆ ತನ್ನ ಕೊಂಬಿನಿಂದ ಸಿಂಹದ ಮೇಲೆ ಆಕ್ರಮಣ ಮಾಡುತ್ತದೆ. ಸಿಂಹದ ಸ್ಥಿತಿಯು ಹದಗೆಡುತ್ತದೆ. ಅಲ್ಲಿಂದ ಜಾರಿಕೊಳ್ಳಲು ತಕ್ಷಣವೇ ಸಿಂಹ ಓಡಿಹೋಗುತ್ತದೆ. ಆದರೆ ಸಿಂಹ ಓಡಿಹೋದರು ಬಿಡದ ಎಮ್ಮೆ ಅದನ್ನು ಬೆನ್ನಟ್ಟುತ್ತದೆ.
Bro was pissed off 😂😂😂 pic.twitter.com/qQTTH8WAPk
— The Instigator (@Am_Blujay) December 23, 2024
ಈ ವಿಡಿಯೋವನ್ನು 59ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ನೋಡುಗರು ಸಿಂಹದ ಗರ್ವಭಂಗವನ್ನು ಆನಂದಿಸುತ್ತಿದ್ದಾರೆ. ಅವರು ಕಾಡು ಎಮ್ಮೆಯ ಶಕ್ತಿಯನ್ನು ಹೊಗಳುತ್ತಿದ್ದಾರೆ.
ಫ್ರೂಟ್ ಕೇಕ್ ಪ್ರಿಯರು ನೋಡಲೇಬೇಡಿ; Viral Video ನೋಡಿದ್ರೆ ತಲೆತಿರುಗೋದು ಗ್ಯಾರಂಟಿ