

Marine Creatures : ಇಡೀ ಜಗತ್ತು ಅನೇಕ ಅಚ್ಚರಿಗಳು ಆಗರ ಮತ್ತು ನಿಗೂಢಗಳ ಸಾಗರ. ವಿಶ್ವದಲ್ಲಿ ಇನ್ನೂ ತಿಳಿಯಲಾಗದ ಅದೆಷ್ಟೋ ರಹಸ್ಯಗಳಿವೆ ಮತ್ತು ಭಯಾನಕ ಸಂಗತಿಗಳಿವೆ. ಅವುಗಳ ಬಗ್ಗೆ ತಿಳಿದಾಗ ನಮ್ಮ ಕಣ್ಣುಗಳ ಹುಬ್ಬು ಒಂದು ಕ್ಷಣ ಮೇಲೇರುತ್ತದೆ. ಅದರಲ್ಲೂ ಸಮದ್ರದ ವಿಚಾರಕ್ಕೆ ಬಂದರೆ ಮನುಷ್ಯ ತಿಳಿದಿರುವುದು ಬೊಗಸೆಯಷ್ಟು ಮಾತ್ರ. ಇನ್ನು ತಿಳಿಯಬೇಕಾದ ಸಹಸ್ರಾರು ಸಂಗತಿಗಳಿವೆ.
ನಮ್ಮ ಭೂಮಿ ಶೇ. 30 ರಷ್ಟು ಭೂಪ್ರದೇಶವನ್ನು ಹೊಂದಿದ್ದು, ಉಳಿದ 70 ರಷ್ಟು ಭಾಗ ನೀರಿನಿಂದ ಆವೃತ್ತವಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಭೂಮಿಗಿಂತ ಸಾಗರ ಪ್ರಪಂಚ ತುಂಬಾ ದೊಡ್ಡದು. ಹೀಗಾಗಿ ಅಲ್ಲಿ ಕೋಟ್ಯಂತರ ಜೀವಿಗಳು ವಾಸಿಸುತ್ತಿವೆ. ಆದರೆ, ಮನುಷ್ಯನಿಗೆ ಗೊತ್ತಾಗಿರುವುದು ಬೆರಳಣಿಕೆಯಷ್ಟು ಮಾತ್ರ. ವಿಚಿತ್ರ ಪ್ರಾಣಿಗಳನ್ನು ನೋಡಿದಾಗಲೆಲ್ಲ ಮನುಷ್ಯನ ಕುತೂಹಲ ಜಾಸ್ತಿಯಾಗುತ್ತಾ ಹೋಗುತ್ತದೆ. ಸಾಗರದಾಳದಲ್ಲಿ ಏನೇನಿರಬಹುದು ತಿಳಿದುಕೊಳ್ಳಲು ಆಸಕ್ತಿ ಹೆಚ್ಚಾಗುತ್ತದೆ.
ಇದೀಗ ನಿಮ್ಮ ಮನತಣಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಸಮುದ್ರಾಳದಲ್ಲಿರುವ ವಿಚಿತ್ರ ಜೀವಿಗಳನ್ನು ಸೆರೆಹಿಡಿಯಲಾಗಿದೆ. ಪ್ರಾಣಿಗಳನ್ನು ನೋಡಿದ್ರೆ ಒಂದು ಕ್ಷಣ ನಿಮ್ಮ ಕಣ್ಣುಗಳನ್ನು ನೀವೇ ನಂಬುವುದಿಲ್ಲ. ಒಂದೊಂದು ಪ್ರಾಣಿಯು ಕೂಡ ತುಂಬಾ ವಿಚಿತ್ರವಾಗಿವೇ. ಈ ವಿಡಿಯೋ ನೆಟಿಜನ್ಗಳ ಮನಸೆಳೆದಿರುವುದು ಮಾತ್ರವಲ್ಲದೆ ಲಕ್ಷಾಂತರ ವೀಕ್ಷಣೆ ಗಳಿಸಿದೆ.
ಆದರೆ, ವೈರಲ್ ಆಗಿರುವ ವಿಡಿಯೋ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಲವರು ಈ ವಿಡಿಯೋವನ್ನು ಕೃತಕ ಬುದ್ಧಿಮತ್ತೆ ಅಂದರೆ ಎಐ ಮೂಲಕ ಕ್ರಿಯೇಟ್ ಮಾಡಲಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಗಮನವಿಟ್ಟು ನೋಡಿ ಅದು ಎಐನಿಂದ ಕ್ರಿಯೇಟ್ ಮಾಡಿದ ರೀತಿ ಇಲ್ಲ. ಅದು ಒರಿಜಿನಲ್ ವಿಡಿಯೋ ಎನ್ನುತ್ತಿದ್ದಾರೆ. ಆದರೆ, ವಿಡಿಯೋ ಅಧಿಕೃತದ ಬಗ್ಗೆ ಸ್ಪಷ್ಟನೆ ಇಲ್ಲ. ಆದರೂ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನು ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್)