ರಹಸ್ಯವಾಗಿ ಗಗನಸಖಿಯ ವಿಡಿಯೋ ರೆಕಾರ್ಡ್ ಮಾಡಿದ ವ್ಯಕ್ತಿ​​; ನೆಟ್ಟಿಗರ ರಿಪ್ಲೆಗೆ ಬಿಚ್ಚಿಬಿದ್ದು ಬಿಚ್ಚಿಟ್ಟ ಅಸಲಿ ಸತ್ಯ | Viral Video

Untitled design - 2024-10-29T200004.158
Published on

ಯಾವುದೇ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ಅನುಮತಿಯಿಲ್ಲದೆ ಯಾರ ಗೌಪ್ಯತೆಗೆ ತೊಂದರೆಯಾಗದಂತೆ ಪ್ರತಿಯೊಬ್ಬರೂ ವಿಶೇಷ ಕಾಳಜಿ ವಹಿಸಬೇಕು. ಒಂದು ವೇಳೆ ಹೀಗೆ ಮಾಡಿದರೆ ಪೊಲೀಸರ ಅತಿಥಿಯಾಗಬೇಕಾಗುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಮಹಿಳೆಯ ವಿಡಿಯೋವನ್ನು ರಹಸ್ಯವಾಗಿ ರೆಕಾರ್ಡ್​ ಮಾಡಿದ್ದಾರೆ.

ವೈರಲ್​ ವಿಡಿಯೋದಲ್ಲಿ ವಿಮಾನದಲ್ಲಿ ಕುಳಿತ ವ್ಯಕ್ತಿಯೊಬ್ಬರು ಗಗನಸಖಿಯನ್ನು ತಮ್ಮ ಫೋನ್‌ನ ಮುಂಭಾಗದ ಕ್ಯಾಮರಾದಲ್ಲಿ ರೆಕಾರ್ಡ್ ಮಾಡುವುದನ್ನು ಕಾಣಬಹುದು. ಇದರಲ್ಲಿ ಒಂದು ಬದಿಯಲ್ಲಿ ಆತ ಕಾಣಿಸುತ್ತಿದ್ದರೆ ಇನ್ನೊಂದು ಬದಿಯಲ್ಲಿ ಗಗನಸಖಿ ಇನ್ನೊಬ್ಬ ಪ್ರಯಾಣಿಕನೊಂದಿಗೆ ಮಾತನಾಡುತ್ತಿರುವುದನ್ನು ನೋಡಬಹುದು. ಈ ಕ್ಲಿಪ್ ನೋಡಿದವರಿಗೆ ಅನುಮತಿಯಿಲ್ಲದೆ ವಿಡಿಯೋ ರೆಕಾರ್ಡ್ ಮಾಡಿರಬಹುದು ಎಂದು ತೋರುತ್ತದೆ. ಅಲ್ಲದೆ ಆತ 'ಅವಳು ಮುದ್ದಾಗಿ ಕಾಣುತ್ತಿದ್ದಾಳೆ, ಅವಳ ನಂಬರ್ ಕೇಳಲು ಯೋಚಿಸುತ್ತಿದ್ದೇನೆ' ಎಂದು ಎಡಿಟ್ ಮಾಡಿ ಬರೆದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಈ 5 ಸೆಕೆಂಡ್​ಗಳ ವಿಡಿಯೋವನ್ನು ಇದುವರೆಗೂ 84 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 1 ಲಕ್ಷ 42 ಸಾವಿರಕ್ಕೂ ಹೆಚ್ಚು ಮಂದಿ ಲೈಕ್‌ ಮಾಡಿದ್ದಾರೆ. 2 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ. ಆ ಹುಡುಗಿಯ ಸ್ಥಾನದಲ್ಲಿ ನಿಮ್ಮ ಸಹೋದರಿ ಇದ್ದಿದ್ದರೆ, ನಿಮ್ಮಂತಹ ಜನರಿಗೆ ಶೂಗಳು ಮಾತ್ರ ಬೇಕು, ನನ್ನ ಸ್ನೇಹಿತ ಕೂಡ ಹೀಗೆ ರೀಲುಗಳನ್ನು ಹಾಕುತ್ತಿದ್ದನು ನಂತರ ಅವನು ಒಂದು ದಿನ ಜೈಲಿಗೆ ಹೋದನು ಎಂದು ಕಾಮೆಂಟ್​ ಮಾಡಿದ್ದಾರೆ.

ಕಾಮೆಂಟ್​ಗಳನ್ನು ನೋಡಿದ ಬಳಿಕ ಗಗನಸಖಿ ಜತೆಗಿನ ಸಂಬಂಧದ ಕುರಿತು ಆ ವ್ಯಕ್ತಿ ದೊಡ್ಡ ಮಾಹಿತಿಯೊಂದನ್ನು ನೀಡಿದ್ದಾರೆ. ವಿಡಿಯೋದಲ್ಲಿ ಕಾಣುವ ಮಹಿಳೆ ನನ್ನ ಗೆಳತಿ. 8 ವರ್ಷಗಳಿಂದ ನಾವು ಡೇಟಿಂಗ್​ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ವಿಡಿಯೋದಿಂದ ಸಾಮಾಜಿಕ ಜಾಲತಾಣದಲ್ಲಿ ನೋಡುವ ವಿಡಿಯೋವನ್ನು ನಂಬಬೇಡಿ ಎಂಬ ಕಥೆಯನ್ನು ನಮಗೆ ಕಲಿಸುತ್ತದೆ. ಕಾಮೆಂಟ್​ ವಿಭಾಗವನ್ನು ಆನಂದಿಸಿ ಎಂದು ಹೇಳಿದ್ದಾರೆ.

ಆ ವ್ಯಕ್ತಿ ವಿವರಣೆ ನೀಡಿದ ಬಳಿಕವು ಕಾಮೆಂಟ್​ನಲ್ಲಿ ಟೀಕಿಸುತ್ತಿದ್ದಾರೆ. ಅಲ್ಲದೆ ಆ ವ್ಯಕ್ತಿ ತನ್ನ ಗೆಳತಿಯನ್ನು ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ತೋರಿಸಬೇಡಿ ಎಂದು ಸೂಚನೆ ನೀಡುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net