

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಲದಲ್ಲಿ ಒಂದಲ್ಲಾ ಒಂದು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಜಾಲತಾಣವು ಮನರಂಜನೆಯ ಸಾಧನವಾಗಿ ಅಥವಾ ಪ್ರಪಂಚದೊಂದಿಗೆ ಸಂಪರ್ಕದಲ್ಲಿರಲು ಮಾತ್ರವಲ್ಲ ಅದು ನಮ್ಮ ಅಗತ್ಯವೂ ಆಗಿದೆ. ದಿನವಿಡೀ ಕೆಲಸದ ಒತ್ತಡ ಅಥವಾ ಕಾರ್ಯನಿರತತೆಯಿಂದ ಮುಕ್ತರಾದ ನಂತರ ಜನರು ಜಾಲತಾಣದಲ್ಲಿನ ವೈರಲ್ ವಿಡಿಯೋಗಳನ್ನು(Viral Video) ನೋಡುತ್ತಾರೆ. ಅದು ಅವರಿಗೆ ನಿರಾಳ ಎಂಬಂತೆ ಅನುಭವವನ್ನು ನೀಡುತ್ತದೆ
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೃದ್ಧರೊಬ್ಬರು ನೃತ್ಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ವೈರಲ್ ವಿಡಿಯೋದಲ್ಲಿ ವೇದಿಕೆಯ ಮೇಲೆ ಅನೇಕ ಯುವಕರು ಮತ್ತು ಹುಡುಗಿಯರು ನೃತ್ಯ ಮಾಡುವುದನ್ನು ನೋಡಬಹುದು. ಆದರೆ ಪ್ರಭುದೇವ ಅವರ ಹಾಡು ಬರುತ್ತಿದ್ದಂತೆ ವಯಸ್ಸಾದ ವ್ಯಕ್ತಿಯೊಬ್ಬರು ಬಂದು ಸೊಂಟಕ್ಕೆ ಲುಂಗಿ ಕಟ್ಟಿಕೊಂಡು ಸಂತೋಷದಿಂದ ಡ್ಯಾನ್ಸ್ ಮಾಡುವುದನ್ನು ಕಾಣಬಹುದು. ಅವರ ನೃತ್ಯವನ್ನು ನೋಡದೇ ಇರಲು ಸಾಧ್ಯವೇ ಇಲ್ಲ.
ಈ ವಿಡಿಯೋವನ್ನು ಇದುವರೆಗೂ 32 ಮಿಲಿಯನ್ ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಆ ವ್ಯಕ್ತಿ ಅತ್ಯುತ್ತಮ ಜೀವನವನ್ನು ನಡೆಸುತ್ತಿದ್ದಾರೆ, ವಯಸ್ಸು ನಿಜವಾಗಿಯೂ ಒಂದು ಸಂಖ್ಯೆ, ಅವರಿಂದ ಜೀವನವನ್ನು ಆನಂದಿಸುವುದು ಹೇಗೆಂದು ಕಲಿಯಬೇಕು, ಅಲ್ಲಿರುವ ಯುವಕರಿಗಿಂತ ಚೆನ್ನಾಗಿ ಡ್ಯಾನ್ಸ್ ಮಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.