VIDEO| ದೆಹಲಿ ಮೆಟ್ರೋದಲ್ಲಿ ಪೋಲ್​ ಡ್ಯಾನ್ಸ್​ ಮಾಡಿದ ಮಹಿಳೆಯರು; ನೆಟ್ಟಿಗರು ಕೆಂಡಾಮಂಡಲ

DMRC Pole Dance
Published on

ನವದೆಹಲಿ: ಸದಾ ಒಂದಿಲ್ಲೊಂದು ವಿಚಾರವಾಗಿ ದೆಹಲಿ ಮೆಟ್ರೋ ಆಗಿಂದಾಗೆ ದೇಶದ ಜನರ ಗಮನವನ್ನು ಸೆಳೆಯುತ್ತಿರುತ್ತದೆ. ಕೆಲವೊಮ್ಮ ಅಸಭ್ಯ ವರ್ತನೆಯಿಂದ, ಹೊಡೆದಾಟದ ವಿಚಾರವಾಗಿ ಹೆಚ್ಚು ಸದ್ದು ಮಾಡುತ್ತಿರುತ್ತದೆ. ಇದೀಗ ಹೊಸ ಘಟನೆ ಒಂದರಲ್ಲಿ ಮಹಿಳೆಯರಿಬ್ಬರು ಪೋಲ್​ ಡ್ಯಾನ್ಸ್​ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಹಳೆಯ ಬಾಲಿವುಡ್​ ಹಾಡಿಗೆ ಇಬ್ಬರು ಮಹಿಳೆಯರು ನೃತ್ಯ ಮಾಡುತ್ತಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯರಿಬ್ಬರು ಪರ್ವೀನ್​ ಬಾಬಿ, ಶಶಿ ಕಪೂರ್ ನಟನೆಯ ಸುಹಾಗ್ ಚಿತ್ರದ ಮೈನ್​ ತೋ ಬೇಗಾರ್​ ಹೂ ಹಾಡಿಗೆ ಇಬ್ಬರು ಪೋಲ್​ ಸುತ್ತ ಡ್ಯಾನ್ಸ್​​ ಮಾಡುತ್ತಿರುವುದ ಕಂಡು ಬಂದಿದೆ.

ಇತ್ತೀಚಿನ ಕೆಲ ದಿನಗಳಲ್ಲಿ ದೆಹಲಿ ಮೆಟ್ರೋದಲ್ಲಿ ಕಿಸ್ಸಿಂಗ್​, ಹಸ್ತಮೈಥುನ , ಹೊಡೆದಾಟದಂತಹ ವಿಡಿಯೋಗಳು ವೈರಲ್​ ಆಗುತ್ತಿದ್ದವು. ಇದೀಗ ಪೋಲ್​ ಡ್ಯಾನ್ಸ್​ ವಿಡಿಯೋ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, DMRC ಅಧಿಕಾರಿಗಳು ಇಷ್ಟೆಲ್ಲಾ ಆದರೂ ಯಾವುದೇ ಕ್ರಮ ಜರುಗಿಸದಿರುವುದಕ್ಕೆ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net