ಕೋಟ್ಯಂತರ ಮೌಲ್ಯದ ಕಾರಿನ ಗಾಜು ಒಡೆದು ಕದಿಯಲು ಖತರ್ನಾಕ್​ ಕಳ್ಳನ ಯತ್ನ; Viral Video ನೋಡಿ ನೆಟ್ಟಿಗರು ಹೇಳಿದ್ದು ಹೀಗೆ..

Untitled design - 2024-12-20T193705.863
Published on

ಮುಂಬೈ: ಕತ್ತಲೆಯ ಲಾಭ ಪಡೆಯುವಲ್ಲಿ ಕಳ್ಳರು ನಿಪುಣರು. ಪ್ರತಿಯೊಬ್ಬ ಕಳ್ಳನು ಕನ್ನ ಹಾಕುವ ಸಮಯದಲ್ಲಿ ಒಂದಲ್ಲಾ ಒಂದು ಸಾಕ್ಷಿಯನ್ನು ಬಿಟ್ಟಿರುತ್ತಾನೆ ಎಂಬ ಮಾತಿದೆ. ಅದರಂತೆ ಸದ್ಯ ಸಾಮಾಜಿ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​(Viral Video) ಆಗುತ್ತಿದೆ. ಆ ವಿಡಿಯೋದಲ್ಲಿ ಕಳ್ಳನು ಕೋಟಿಗಟ್ಟಲೆ ಮೌಲ್ಯದ ಕಾರನ್ನು ಕದಿಯಲು ಪ್ರಯತ್ನಿಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಈ ಸಿಸಿಟಿವಿ ದೃಶ್ಯಾವಳಿಗಳು ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ಪ್ರಕರಣ ಮಹಾರಾಷ್ಟ್ರದ ಅಂಧೇರಿಯ ಲೋಖಂಡವಾಲಾ ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದೆ.

ಈ ಕೋಟ್ಯಂತರ ಮೌಲ್ಯದ ಪೋರ್ಷೆ ಕಾರು ಸಿನಿಮಾ ರಂಗಕ್ಕೆ ಸಂಬಂಧಿಸಿದ ವಾಸಿಂ ಅಮ್ರೋಹಿ ಎಂಬುವವರಿಗೆ ಸೇರಿದ್ದಾಗಿದೆ. ವಾಸಿಂ ವೃತ್ತಿಯಲ್ಲಿ ಬರಹಗಾರ, ಕಲಾವಿದ ಮತ್ತು ಚಲನಚಿತ್ರ ನಿರ್ಮಾಪಕ. ಈ ಘಟನೆ ವಿಡಿಯೋವನ್ನು ಸ್ವತಃ ವಾಸಿಂ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕಂಡಿದ್ದಾರೆ.

ವೈರಲ್​ ವಿಡಿಯೋದಲ್ಲಿ ಕಳ್ಳನೊಬ್ಬ ಕಾರಿನ ಗಾಜು ಒಡೆದು ಕಾರಿನೊಳಗೆ ಇಟ್ಟಿದ್ದ ವಸ್ತುಗಳನ್ನು ಕದಿಯಲು ಯತ್ನಿಸುತ್ತಿದ್ದಾನೆ. ಬಹುಶಃ ಅವನು ಕಾರನ್ನು ಕದಿಯಲು ಪ್ರಯತ್ನಿಸಿ ತಕ್ಷಣ ಕಾರಿನ ಗಾಜು ಒಡೆದಿದ್ದಾನೆ. ಆದರೆ ಕಾರಿನ ಲೈಟ್​​ಗಳು ಮಿನುಗಲು ಪ್ರಾರಂಭಿಸುತ್ತದೆ ಮತ್ತು ಸೈರಲ್​​ ಸದ್ದು ಕೇಳಲು ಪ್ರಾರಂಭವಾಗುತ್ತದೆ. ಇದ್ದರಿಂದ ಗಾಬರಿಯಾದ ಆ ವ್ಯಕ್ತಿ ತಕ್ಷಣ ಅಲ್ಲಿಂದ ಓಡಿ ಹೋಗಿದ್ದಾನೆ. ಈ ವೇಳೆ ಆರಾಮವಾಗಿ ನಡೆಯುತ್ತಿದ್ದಾಗ ಆತನ ಮುಖ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದ್ದು ಹಲವರು ಪ್ರತಿಕ್ರಿಯಿಸಿದ್ದಾರೆ. ಈ ಘಟನೆಯಿಂದ ನಾವು ಕಾರಿನಲ್ಲಿ ಏನನ್ನೂ ಬಿಡಬಾರದು ಎಂದು ತಿಳಿಯುತ್ತದೆ, ನೀವು ಕಳ್ಳರಾಗುತ್ತೀರಾ?, ಸಿಸಿಟಿವಿಯಲ್ಲಿ ನಿನ್ನ ಮುಖ ಸೆರೆಯಾಗಿದೆ, ಈಗ ಹೇಗಿದ್ದೀಯಾ ಮಗನೆ, ಪೋರ್ಷೆಯಂತಹ ದುಬಾರಿ ಕಾರಿನಿಂದ ಅಣ್ಣ ಕಳ್ಳತನ ಮಾಡುತ್ತಿದ್ದರೂ ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net