

ಬ್ಯಾಂಕಾಂಕ್: ನೀವು ಶಾಪಿಂಗ್ ಮಾಲ್ಗೆ ಹೋದಾಗ ಅಥವಾ ಸೂಪರ್ ಮಾರ್ಕೆಟ್ಗೆ ಹೋದಾಗ ಯಾವುದಾದರೂ ದೈತ್ಯ ಪ್ರಾಣಿ ಅಲ್ಲಿಗೆ ಎಂಟ್ರಿ ಕೊಟ್ಟರೆ ಹೇಗಿರುತ್ತೆ ಅಲ್ವಾ? ಅದನ್ನು ಊಹೆ ಮಾಡಿಕೊಂಡ್ರೆನೆ ಭಯ ಆಗುತ್ತೆ.
ಇಂತಹದೇ ನಿಜ ಘಟನೆ ಥೈಲ್ಯಾಂಡ್ನಲ್ಲಿ ನಡೆದಿದೆ. ಸೂಪರ್ ಮಾರ್ಕೆಟ್ ಒಂದಕ್ಕೆ ದೈತ್ಯ ಗಾತ್ರದ ಹಲ್ಲಿ ಯೊಂದು (Asian Water Monitor Lizard) ಬಂದು ಅಚ್ಚರಿ ಮೂಡಿಸಿದೆ. ಬ್ಯಾಂಕಾಂಕ್ ಹೊರವಲಯದ ಸೂಪರ್ ಮಾರುಕಟ್ಟೆಯಲ್ಲಿ ನಡೆದ ಘಟನೆ ಇದಾಗಿದೆ. ಆದರೆ ಯಾವಾಗ ನಡೆದಿದ್ದು ಎಂಬುದು ಬಹಿರಂಗವಾಗಿಲ್ಲ. ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್ ಆಗಿದೆ.
ಸೂಪರ್ ಮಾರ್ಕೆಟ್ನಲ್ಲಿ ಹಲ್ಲಿ ತನ್ನ ಆರ್ಭಟ ತೋರಿಸಿದೆ. ಅಲ್ಲಿದ್ದ ಸಾಮಾನುಗಳನ್ನು ಜೋಡಿಸಿಟ್ಟಿದ್ದ ರಾಕ್ನ ಮೇಲೆ ಅಲೆದಾಡಿ ಕಡೆಗೆ ಅಲ್ಲಿಯೇ ಕುಳಿತುಕೊಂಡಿದೆ. ಸ್ಥಳದಲ್ಲಿದ್ದವರು ಈ ಬೃಹತ್ ಹಲ್ಲಿಯನ್ನು ನೋಡಿ ಕೂಗಾಡಿದ್ದಲ್ಲದೇ ವಿಡಿಯೋ ಮಾಡಿಕೊಂಡಿದ್ದಾರೆ. ಕಡೆಗೆ ಪ್ರಾಣಿ ಸಂಗ್ರಾಹಲಯದವರು ಅದನ್ನು ಬಂಧಿಸಿ, ಜೂನಲ್ಲಿ ಇಟ್ಟಿದ್ದಾರೆ.