

ಇತ್ತೀಚಿನ ದಿನಗಳಲ್ಲಿ ಜನರು ಸೂಪರ್ ಮಾರ್ಕೆಟ್ ಮತ್ತು ಮಾಲ್ಗಳಿಂದ ಸಣ್ಣ ಚೀಲಗಳಲ್ಲಿ ಹಿಟ್ಟನ್ನು ತರಲು ಪ್ರಾರಂಭಿಸಿದ್ದಾರೆ. ಅದೇ ಮೊದಲೆಲ್ಲಾ ಗಿರಣಿಯಲ್ಲಿ ಹಿಟ್ಟು ಮಾಡಿಸಲು ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗುತಿತ್ತು. ಹೆಚ್ಚಿನ ಜನರು ಗೋಧಿ ಹಿಟ್ಟಿನ ರೊಟ್ಟಿ, ಚಪಾತಿಯನ್ನು ಇಷ್ಟಪಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಜನರು ಮನೆಯಲ್ಲಿ ಗೋಧಿ ತೊಳೆದು ಅದನ್ನು ಒಣಗಿಸಿ ನಂತರ ಹಿಟ್ಟು ಮಾಡಿಸುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್(Viral Video) ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ಆರಂಭದಲ್ಲಿ ವಾಷಿಂಗ್ ಮೆಷಿನ್ನ ಡ್ರೈಯರ್ ಚಾಲನೆಯಲ್ಲಿದೆ. ಡ್ರೈಯರ್ ನಿಂತ ತಕ್ಷಣ ವ್ಯಕ್ತಿಯು ಅದನ್ನು ತೆಗೆದು ಬಟ್ಟೆಯೊಳಗೆ ಇಡಲಾದ ಗೋಧಿಯನ್ನು ಹೊರತೆಗೆಯುತ್ತಾನೆ. ಗೋಧಿಯನ್ನು ಬಟ್ಟೆಯಲ್ಲಿ ಬಿಗಿಯಾಗಿ ಮುಚ್ಚಿ ಡ್ರೈಯರ್ನಲ್ಲಿ ಹಾಕಲಾಗುತ್ತದೆ. ಹೆಚ್ಚಿನ ವೇಗದಲ್ಲಿ ತಿರುಗುತ್ತಿದ್ದರೂ, ತೊಳೆಯುವ ಯಂತ್ರದಲ್ಲಿ ಗೋಧಿಯ ಒಂದು ಕಾಳು ಬೀಳುವುದಿಲ್ಲ. ಮೆಷಿನ್ನಿಂದ ಗೋಧಿಯನ್ನು ತೆಗೆದ ನಂತರ ವ್ಯಕ್ತಿಯು ಅದನ್ನು ಅನ್ಪ್ಯಾಕ್ ಮಾಡಲು ಪ್ರಾರಂಭಿಸುತ್ತಾನೆ.
ನಂತರ ಅವನು ಗೋಧಿಯನ್ನು ಖಾಲಿ ಟಬ್ನಲ್ಲಿ ಹಾಕುತ್ತಾನೆ. ಅದರ ನಂತರ ತನ್ನ ಕೈಯಿಂದ ಗೋಧಿಯನ್ನು ಮುಟ್ಟಿದಾಗ ಅದು ಸಂಪೂರ್ಣವಾಗಿ ಒಣಗಿರುವುದನ್ನು ಅವನು ತೋರಿಸುವುದನ್ನು ನೋಡಬಹುದು. ಇದರೊಂದಿಗೆ ಸುಮಾರು 36 ಸೆಕೆಂಡುಗಳ ಈ ಕ್ಲಿಪ್ ಕೊನೆಗೊಳ್ಳುತ್ತದೆ.
ಈ ವಿಡಯೋವನ್ನು 32 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು ಅನೇಕರು ಪ್ರತಿಕ್ರಿಯಿಸಿದ್ದಾರೆ. ವಾಷಿಂಗ್ ಮೆಷಿನ್ ಕೂಡ ಹೇಳುತ್ತಿರಬೇಕು ನನ್ನ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ, ಈ ಜಗತ್ತು ತುಂಬಾ ಕೆಟ್ಟದು ತಾಯಿ, ಹೇ ಬ್ರದರ್ ನೀವು ಏನು ಮಾಡಿದ್ದೀರಿ?, ಗೋಧಿಯನ್ನು ಒಣಗಿಸಲು ನಿಂಜಾ ತಂತ್ರ, ಈ ಕಲ್ಪನೆಯು ಭಾರತದಿಂದ ಹೊರಗೆ ಹೋಗಬಾರದು ಎಂದು ಕಾಮೆಂಟ್ ಮಾಡಿದ್ದಾರೆ.