Mahakumbh 2025 | ಮಕ್ಕಳು ಕಳೆದುಹೋಗದಂತೆ ಪಾಲಕರ ಸ್ಮಾರ್ಟ್​ ಐಡಿಯಾ; ವಿಡಿಯೋ ನೋಡಿದ ನೆಟ್ಟಿಗರು ಶಾಕ್​​​​

Untitled design (100)
Published on

ಲಖನೌ: ಪ್ರಯಾಗ್​​​ರಾಜ್‌ನಲ್ಲಿ ಮಹಾಕುಂಭಮೇಳ 2025(Mahakumbh 2025) ನಡೆಯುತ್ತಿದೆ. ಜನವರಿ 13 ರಂದು ಪ್ರಾರಂಭವಾದ ಈ ಕಾರ್ಯಕ್ರಮವು ಫೆಬ್ರವರಿ 26ರಂದು ತ್ರಿವೇಣಿ ಸಂಗಮದಲ್ಲಿ ಮಹಾಶಿವರಾತ್ರಿಯ ಸ್ನಾನದೊಂದಿಗೆ ಮುಕ್ತಾಯಗೊಳ್ಳಲಿದೆ. ವಿಶ್ವದ ಅತಿ ದೊಡ್ಡ ಧಾರ್ಮಿಕ ಮಹಾಕುಂಭ ಕೋಟಿಗಟ್ಟಲೆ ಜನರು ಒಟ್ಟುಗೂಡಿದ್ದಾರೆ,

ಕೋಟ್ಯಾಂತರ ಜನರಿರುವ ಮಹಾಕುಂಭದಲ್ಲಿ ತಮ್ಮ ಪ್ರೀತಿಪಾತ್ರರಿಂದ ಬೇರ್ಪಡುವ ಭಯವು ಯಾವಾಗಲೂ ಇರುತ್ತದೆ. ಅದರಲ್ಲೂ ಚಿಕ್ಕ ಮಕ್ಕಳು ಕಳೆದುಹೋಗುವ ಸಾಧ್ಯತೆಯೆ ಹೆಚ್ಚು. ಇಂತಹ ಸಮಸ್ಯೆಯ ಭಯದಿಂದ ದಂಪತಿ ತಮ್ಮ ಮಕ್ಕಳನ್ನು ಸುರಕ್ಷಿತವಾಗಿಡಲು ಅದ್ಭುತ ಪರಿಹಾರವನ್ನು ಕಂಡುಹಿಡಿದಿದ್ದಾರೆ. ಆ ದಂಪತಿ ಸ್ಮಾರ್ಟ್​ ಐಡಿಯಾ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್​ ಆಗುತ್ತಿದೆ. ಇದನ್ನು ನೋಡಿ ಜನರು ಬೆರಗಾದರು.

ಪಾಲಕರು ತಮ್ಮ ಚಿಕ್ಕ ಮಗುವಿನೊಂದಿಗೆ ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಹಾ ಕುಂಭಮೇಳದಲ್ಲಿ ನೆರೆದಿದ್ದ ಜನಸ್ತೋಮವನ್ನು ಕಂಡು ತನ್ನ ಮಗು ದಾರಿ ತಪ್ಪದಂತೆ ಜಾಣ ವಿಧಾನವನ್ನು ಅಳವಡಿಸಿಕೊಂಡರು. ಅವರು ತನ್ನ ಮಗುವಿನ ಬೆನ್ನಿನ ಮೇಲೆ ಕೆಲವು ಕಾಗದದ ಹಾಳೆಗಳನ್ನು ಪಿನ್ ಮಾಡಿದ್ದಾರೆ. ಅದರಲ್ಲಿ ಮಗು ಕಳೆದುಹೋದರೆ ಅವರನ್ನು ಗುರುತಿಸಲು ಅವರ ಮನೆ ವಿಳಾಸ ಮತ್ತು ಸಂಪರ್ಕ ಮಾಹಿತಿ ಬರೆದಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಈ ವಿಡಿಯೋ ನೋಡಿದ ಅನೇಕರು ಪ್ರತಿಕ್ರಿಯಿಸುತ್ತಿದ್ದಾರೆ. ಮಗು ಕಳೆದುಹೋದರೆ ಅಥವಾ ಆಕಸ್ಮಿಕವಾಗಿ ಅವರಿಂದ ಬೇರ್ಪಟ್ಟರೆ ಸುಲಭವಾಗಿ ಪಡೆಯಬಹುದು. ಸ್ಮಾರ್ಟ್ ಪೇರೆಂಟಿಂಗ್, ಇದು ತುಂಬಾ ಸುಲಭ ಮತ್ತು ಒಳ್ಳೆಯದು, ಎಲ್ಲ ಪಾಲಕರು ಇದನ್ನು ಅಳವಡಿಸಿಕೊಳ್ಳಬೇಕು!, ಅದ್ಭುತ ಆದರೆ ಹೆಚ್ಚು ಪ್ರಾಯೋಗಿಕ ತಂತ್ರ, ಈ ಐಡಿಯಾವನ್ನು ಭಾರತದಲ್ಲಿ ಮಾತ್ರವಲ್ಲ ಜಾಗತಿಕವಾಗಿ ಬಳಸಬೇಕು, ಯೇ ಇಂಡಿಯಾ ವಾಲೇ ಹೈ ಚೀನಾ ವಾಲೋನ್ ಸೆ ಕಾಮ್ ನಹೀ! (ಭಾರತೀಯರು ಚೀನೀಯರಿಗಿಂತ ಕಡಿಮೆಯಿಲ್ಲ), ಯೇ ಇಂಡಿಯಾ ಹ ಯಹಾ ಬಹುತ್ ಪ್ರತಿಭಾವಂತ್​​ ಲೋಗೆ ಹೈ! (ಇದು ಭಾರತ; ಇಲ್ಲಿ ಅನೇಕ ಪ್ರತಿಭಾವಂತರಿದ್ದಾರೆ!) ಎಂದು ಕಾಮೆಂಟ್​ ಮಾಡುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net