Viral Video| ಹುಲಿ ಬಾಯಿಗೆ ಕೈ ಹಾಕಿ ಯುವಕನ ಆಟ; ಮುಂದೇನಾಯ್ತು ನೀವೇ ನೋಡಿ

Tiger
Published on

ನವದೆಹಲಿ: ಸಾಮಾನ್ಯವಾಗಿ ನಾವು ನೋಡಿರುಚಂತೆ ಕಾಡು ಪ್ರಾಣಿಗಳನ್ನು ಮೃಗಾಲಯದಲ್ಲಿ (Zoo) ಅಥವಾ ಪರದೆಯಲ್ಲಿ ನೋಡಿದರು ಹೆಚ್ಚಿನವರು ಭಯ ಬೀಳುತ್ತಾರೆ. ಭಾರತ (India) ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಕಾಡುಪ್ರಾಣಿಗಳನ್ನು ಮನೆಯಲ್ಲಿ ಸಾಕಬಾರದೆಂಬ ಕಾನೂನಿದೆ. ಆದರೆ, ಕಠೀನ ಕಾನೂನಿನ ಹೊರತಾಗಿಯೂ ಕೆಲವೊಂದು ರಾಷ್ಟ್ರದಲ್ಲಿ ವನ್ಯಜೀವಿಗಳನ್ನು ಮನೆಯಲ್ಲಿ ಸಾಕಲು ಅವಕಾಶ ನೀಡಲಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video)​ ಆಗಿದೆ.

ಪಾಕಿಸ್ತಾನಿ ಇನ್‌ಫ್ಲುಯೆನ್ಸರ್‌ ನೌಮನ್‌ ಹಸನ್‌ (Nouman.hassan1) ಎಂಬಾತ ತನ್ನ ಮನೆಯಲ್ಲಿ ಹುಲಿಯನ್ನು ಸಾಕಿದ್ದು, ತನ್ನ ಸಾಕುಪ್ರಾಣಿ ಜೊತೆಗಿನ ಫೋಟೋ ಹಾಗೂ ವಿಡಿಯೋವನ್ನು ಆಗಿಂದಾಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾನೆ. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸಖತ್​ ಸೌಂಡ್​ ಮಾಡುತ್ತಿದೆ.

ವೈರಲ್​​ ಆಗಿರುವ ವಿಡಿಯೋ ನೋಡುವುದಾದರೆ ಇನ್‌ಫ್ಲುಯೆನ್ಸರ್‌ ನೌಮನ್‌ ಹಸನ್‌ (Nouman.hassan1)  ತಾನು ಸಾಕಿರುವ ಹುಲಿಯ ಬಾಯಿಗೆ ಕೈಯನ್ನು ಹಾಕಿ ಅದರ ಜೊತೆ ನಾಯಿ ಮರಿಯೊಂದಿಗೆ ಆಟವಾಡಿದಂತೆಹುಲಿಯೂ ಕೂಡಾ ಆತನಿಗೆ ಏನು ತೊಂದರೆ ಮಾಡದೆ ಆಟವಾಡುತ್ತಿದ್ದು,ನನ್ನ ಹುಲಿ ರಾಕಿ ತುಂಬಾನೇ ಫ್ರೆಂಡ್ಲಿ ಎಂದು ಅಡಿಬರಹವನ್ನು ನೀಡಿದ್ದಾನೆ.

ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್​ ಆಗುತ್ತಿದ್ದು, ಈತನ ಧೈರ್ಯವನ್ನು ಅನೇಕರು ಶ್ಲಾಘಿಸಿದ್ದಾರೆ. ಅನೇಕರು ಇದು ನಾಯಿನಾ ಅಥವಾ ಹುಲಿನಾ ಎಂದು ಕಮೆಂಟ್​ ಮಾಡಿ ಪ್ರಶ್ನಿಸಿದ್ದಾರೆ. ಸದ್ಯ ಈ ವಿಡಿಯೀ ಒಂದು ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net