

ಮುಂಬೈ: ನೂತನ ಕೋಚ್ ಗೌತಮ್ ಗಂಭೀರ್ (Gautam Gambhir) ಸಾರಥ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ವೈಟ್ವಾಷ್ ಆಗುವ ಮೂಲಕ ಟೀಮ್ ಇಂಡಿಯಾ (Team India) ಅನಪೇಕ್ಷಿತ ದಾಖಲೆಗಳಿಗೆ ಕೊರಳೊಡ್ಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಇನ್ನೂ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ (Gautam Gambhir) ವಿರುದ್ಧ ಕಿಡಿಕಾರುತ್ತಿದ್ದು, ಇವರನ್ನು ಕೋಚ್ ಸ್ಥಾನದಿಂದ ಕೆಳಗಿಳಿಸುವಂತೆ ಕ್ರೀಡಾಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಬಾಲಿವುಡ್ ನಟ ಶಾರುಖ್ ಖಾನ್ (Shahrukh Khan) ಕುರಿತು ಮಾಡಿರುವ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
ನವೆಂಬರ್ 02ರಂದು ಬಾಲಿವುಡ್ ನಟ ಶಾರುಖ್ ಖಾನ್ 59ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಮ್ಮ ಶಕ್ತಿ, ವರ್ಚಸ್ಸು ಮತ್ತು ಮೋಡಿ ಪ್ರತಿ ವರ್ಷ ಹೆಚ್ಚು ತಾರುಣ್ಯವನ್ನು ಪಡೆಯುತ್ತದೆ! ಹೀಗಿ ಶಾಶ್ವತವಾಗಿ ಪ್ರೀತಿಯನ್ನು ಹರಡುತ್ತಿರಿ ಎಂದು ಗೌತಮ್ ಗಂಭೀರ್ ( Gautam Gambhir ) ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಸಖತ್ ವೈರಲ್ ಆಗಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ ಶಾರುಖ್, ನಾನು ಇನ್ನೂ ಚಿಕ್ಕವನಾಗಿದ್ದೇನೆ ಎಂದು ಭಾವಿಸಿದೆ. ನಿಮ್ಮ ಸ್ಫರ್ತಿಗಾಗಿ ಧನ್ಯವಾದಗಳು GG (Gautam Gambhir) ಶಾಶ್ವತವಾಗಿ ನಮ್ಮ ಕ್ಯಾಪ್ಟನ್ ಲವ್ ಯೂ ಎಂದು ರಿಪ್ಲೈ ಮಾಡಿದ್ದಾರೆ.
ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಅಧಿಕಾರ ವಹಿಸಿಕೊಂಡ ಬಳಿಕ ತಂಡ ಸಿಹಿಗಿಂತ ಕಹಿ ಲಭಿಸಿದ್ದೆ ಹೆಚ್ಚು ಎಂದರೆ ತಪ್ಪಾಗಲಾರದು. ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಹೊಸದರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಭಾರತ ತಂಡ ಹೀನಾಯವಾಗಿ ಸೋತಿತ್ತು. ಇದಾದ ಬಳಿಕ ನಡೆದ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ತಂಡ ಕಮ್ಬ್ಯಾಕ್ ಮಾಡಿತ್ತಾದರು ಇದೀಗ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸೋಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ. ಇದೆಲ್ಲದರ ನಡುವೆ ಕೋಚ್ ಸ್ಥಾನದಿಂದ ಕೆಳಗಿಳಿಸುವಂತೆ ಆಗ್ರಹ ಕೇಳಿ ಬರುತ್ತಿದೆ.