ಸೇಡಿಗಾಗಿ ಮಾಜಿ ಬಾಯ್​ಫ್ರೆಂಡ್​ ಮನೆಗೆ 100 ಪಿಜ್ಜಾ ಆರ್ಡರ್ ಮಾಡಿದ ಗೆಳತಿ; Viral Video ನೋಡಿ ನೆಟ್ಟಿಗರು ಸಿಡಿಮಿಡಿ

Untitled design (43)
Published on

ಪ್ರೇಮಿಗಳ ದಿನದಂದು ಪ್ರೀತಿ ಮತ್ತು ಪ್ರೇಮದ ಕಥೆಗಳನ್ನು ಕೇಳುತ್ತೇವೆ. ಗುರಗಾಂವ್‌ನಲ್ಲಿ ವಾಸಿಸುವ ಹುಡುಗಿಯೊಬ್ಬಳು ಈ ದಿನ ಮಾಡಿರುವ ಕೆಲಸ ಸಾಮಾಜಿಕ ಜಾಲತಾಣದಲ್ಲಿ ವೈರಲ್​(Viral Video) ಆಗಿದೆ. ಗುರ್ಗಾಂವ್‌ನ ಹುಡುಗಿಯೊಬ್ಬಳು ಪ್ರೇಮಿಗಳ ದಿನದಂದು ತಮ್ಮ ಮಾಜಿ ಗೆಳೆಯನ ಮನೆಗೆ 100 ಪಿಜ್ಜಾಗಳನ್ನು ಆರ್ಡರ್ ಮಾಡಿದ್ದಾಳೆ. ಅವರಿಬ್ಬರ ನಡುವಿನ ಸಂಬಂಧ ಮುರಿದುಬಿದ್ದಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡಿದ್ದಾಳೆ ಎನ್ನಲಾಗಿದೆ.

ಆದರೆ ಈ ಆರ್ಡರ್ ಅನ್ನು 'ಕ್ಯಾಶ್ ಆನ್ ಡೆಲಿವರಿ' ಆಧಾರದ ಮೇಲೆ ನೀಡಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಅದು ಹುಡುಗನ ಮನೆಗೆ ತಲುಪಿದಾಗ ಆತ ಕೂಡ ಸಂಪೂರ್ಣವಾಗಿ ಅಸಮಾಧಾನಗೊಂಡು ಡೆಲಿವರಿ ಬಾಯ್ ಜತೆ ಜಗಳವಾಡಿದ್ದಾನೆ. 100 ಪಿಜ್ಜಾ ಬಾಕ್ಸ್‌ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾಗ ಬಳಕೆದಾರರು ಅದಕ್ಕೆ ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಹುಡುಗಿಯ ಈ ಕ್ರಮವನ್ನು ಅನೇಕ ಬಳಕೆದಾರರು ವಿರೋಧಿಸುತ್ತಿರುವುದು ಕೂಡ ಕಂಡುಬರುತ್ತದೆ.

ವೈರಲ್​ ವಿಡಿಯೋದಲ್ಲಿ ಡೆಲಿವರಿ ಬಾಯ್ ಕೈಯಲ್ಲಿ ಪಿಜ್ಜಾ ಬಾಕ್ಸ್‌ಗಳೊಂದಿಗೆ ಮೆಟ್ಟಿಲುಗಳನ್ನು ಹತ್ತುವುದನ್ನು ಕಾಣಬಹುದು. ಅವನು ಗ್ರಾಹಕರ ಮನೆ ಬಾಗಿಲನ್ನು ತಲುಪಿದ ತಕ್ಷಣ ಅಲ್ಲಿ ಈಗಾಗಲೇ ಪಿಜ್ಜಾ ಬಾಕ್ಸ್​​​ಗಳ ರಾಶಿ ಕಾಣಿಸಿಕೊಂಡಿದೆ. ಅಂತಹ ಪರಿಸ್ಥಿತಿಯಲ್ಲಿ ಡೆಲಿವರಿ ಬಾಯ್ ಉಳಿದ ಪಿಜ್ಜಾ ಬಾಕ್ಸ್‌ಗಳನ್ನು ಅಲ್ಲೇ ಇಟ್ಟುಕೊಂಡು ತನ್ನ ಫೋನ್‌ನಲ್ಲಿ ಆರ್ಡರ್‌ಗೆ ಸಂಬಂಧಿಸಿದ ಮಾಹಿತಿಯನ್ನು ನೋಡಲು ಪ್ರಾರಂಭಿಸುತ್ತಾನೆ. ಅದರೊಂದಿಗೆ, ಸುಮಾರು 14 ಸೆಕೆಂಡುಗಳ ಈ ವಿಡಿಯೋ ಕೊನೆಗೊಳ್ಳುತ್ತದೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಖಾತೆ ‘ಎಕ್ಸ್​’ನಲ್ಲಿ ಪೋಸ್ಟ್ ಮಾಡಲಾಗಿದೆ. ಈವರೆಗೂ ಈ ವಿಡಿಯೋವನ್ನು 5.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ದಯವಿಟ್ಟು ಈ ಕಿರುಕುಳದಲ್ಲಿ ತಮಾಷೆಯೇನಿದೆ ಎಂಬುದನ್ನು ವಿವರಿಸಿ? ಒಬ್ಬ ವ್ಯಕ್ತಿ ತನ್ನ ಮಾಜಿ ಗೆಳತಿಗೆ ಈ ರೀತಿ ಕಿರುಕುಳ ನೀಡಿದರೆ ಅಥವಾ ಪೊಲೀಸರಿಗೆ ಕರೆ ಮಾಡಲು ಸಲಹೆ ನೀಡಿದರೆ, ನೀವು ಹೀಗೆ ನಗುತ್ತೀರಾ? ಆದರೆ ನೀವು ಇದನ್ನು ಯಾವುದಾದರೂ ಕಂಪನಿಯ ಜಾಹೀರಾತು ಅಭಿಯಾನವಾಗಿಯೂ ಮಾಡುತ್ತಿದ್ದರೆ ದಯವಿಟ್ಟು ಇದನ್ನು ಮಾಡಬೇಡಿ. ಇದು ಅನಾರೋಗ್ಯಕರ ಮನಸ್ಥಿತಿಯನ್ನು ತೋರಿಸುತ್ತದೆ, ಇದು ಬಹುಶಃ ಒಂದು ಜಾಹೀರಾತು, ಯಾರು ಮತ್ತು ಯಾರಿಗಾಗಿ ಆರ್ಡರ್​ ಮಾಡಿದ್ದಾರೆ ಎಂದು ಹೇಗೆ ತಿಳಿಯುತ್ತದೆ, ಜಾಹೀರಾತಿನಲ್ಲಿ ಪರಿಣಿತರು ಅವರು ಬ್ರ್ಯಾಂಡ್ ಹೆಸರನ್ನು ಸ್ಪಷ್ಟವಾಗಿ ತೋರಿಸುತ್ತಿದ್ದಾರೆ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net