VIDEO| 18ರ ಯುವತಿಯನ್ನು ಮದುವೆಯಾದ ವೃದ್ಧ!

odisha wedding
Published on

ಒಡಿಶಾ: ಪ್ರೀತಿಗೆ ಕಣ್ಣಿಲ್ಲ ಎನ್ನವ ಮಾತಿಗೆ. ವಯಸ್ಸು, ಜಾತಿ, ಧರ್ಮ ಮತ್ತು ಇತರ ಎಲ್ಲ ಅಡೆತಡೆಗಳನ್ನು ಮೀರಿ ಪ್ರೀತಿಸಿದ ವ್ಯಕ್ತಿ ಜತೆ ಒಂದಾಗಿರುವ ಎಷ್ಟೋ ಉದಾಹರಣೆಗಳಿವೆ. ವಯಸ್ಸಿನ ಅಂತರವನ್ನು ಹೊಂದಿರುವ ದಂಪತಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ನಂಬಲಾಗಿದೆ. ಆದರೆ ಇಲ್ಲೊಬ್ಬ ವೃದ್ಧ ಇದ್ಯಾವ ಯೋಚನೆ ಇಲ್ಲದೆ ಚಿಕ್ಕ ವಯಸ್ಸಿನ ಹುಡುಗಿಯನ್ನು ಮದುವೆಯಾಗಿದ್ದಾನೆ.

80 ಅಥವಾ 90 ರ ಹರೆಯದವರಂತೆ ಕಾಣುವ ವೃದ್ಧ 18ರ ಯುವತಿಯನ್ನು ಮದುವೆಯಾಗಿರುವ ವೀಡಿಯೋ ವೈರಲ್ ಆಗಿದೆ. ವಯಸ್ಸಾದ ವ್ಯಕ್ತಿ ವರನ ಗೆಟಪ್‌ನಲ್ಲಿ ಪೇಟ ಧರಿಸಿ, ಹೂವಿನ ಮಾಲೆ ಹಾಕಿ ಕುಳಿತಿದ್ದನು. ಯುವತಿ ವಧುವಿನ ಗೆಟಪ್‌ನಲ್ಲಿ ಅವನ ಪಕ್ಕದಲ್ಲಿ ಕುಳಿತಿದ್ದಾಳೆ. ಇಬ್ಬರೂ ತಮ್ಮ ಮದುವೆಯ ನಂತರ ಸಂತೋಷವಾಗಿ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ..

ಇನ್​ಸ್ಟಾಗ್ರಾಮ್​​​ನಲ್ಲಿ ಈ ವಿಡಿಯೋ ವೈರಲ್​​ ಆಗುತ್ತಿದ್ದಂತೆ. ಸಾಕಷ್ಟು ಲೈಕ್ಸ್ ಮತ್ತು ಕಾಮೆಂಟ್‌ಗಳನ್ನು ಬಂದಿವೆ. ಮದುವೆಯಾಗಿರುವ ವೃದ್ಧ ಸುತ್ತಮುತ್ತಲಿದ್ದವರು ಟೀಕಿಸುವಾಗ ಬೊಜ್ಜು ಬಾಯಲ್ಲಿ ಜೋರಾಗಿ ನಗುವುದನ್ನು ನೋಡಿ ವಧು ನಾಚಿಕೆಯಿಂದ ತಲೆ ತಗ್ಗಿಸುತ್ತಾಳೆ, ಇವತ್ತಿನ ಕಾಲದ ಹುಡುಗಿಯರಿಗೆ ವೃದ್ಧರೇ ಯಾಕೆ ಇಷ್ಟವಾಗುತ್ತಾರೆ' ಎಂದು ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದಾರೆ.

ವಿಡಿಯೋದ ಬ್ಯಾಕ್‌ಗ್ರೌಂಡ್ ವಾಯ್ಸ್‌ನಲ್ಲಿ ಹುಡುಗಿ ಯಾಕೆ ಇಂಥಾ ವೃದ್ಧನನ್ನು ಮದುವೆಯಾಗುತ್ತಿದ್ದಾಳೆ ಎಂದು ಅಚ್ಚರಿಪಡಬೇಡಿ. ಒಂದು ಆತನ ಇನ್‌ಕಮ್ ಹೆಚ್ಚು, ಇನ್ನೊಂದು ಆತನ ಆಯುಷ್ಯ ಕಡಿಮೆ ಅನ್ನೋ ಕಾರಣವಾಗಿದೆ ಎಂದು ಹೇಳಿರುವುದನ್ನು ಕೇಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net