ಎರಡು ಕೈಗಳಿಲ್ಲದಿದ್ದರೂ ಫುಡ್​ ಡೆಲಿವರಿ ಮಾಡುತ್ತಿರುವ ವ್ಯಕ್ತಿ; Viral Video ನೋಡಿ ನಿಮಗೊಂದು ಸಲಾಂ ಎಂದ ನೆಟ್ಟಿಗರು

Untitled design - 2024-10-28T185045.084
Published on

ಒಬ್ಬ ವ್ಯಕ್ತಿಯು ದೃಢಸಂಕಲ್ಪವನ್ನು ಹೊಂದಿದ್ದರೆ ಆತನ ಹಾದಿಯಲ್ಲಿ ಯಾವುದೇ ಪರಿಸ್ಥಿತಿಯು ಅಡ್ಡಿಯಾಗುವುದಿಲ್ಲ ಎಂಬ ಮಾತಿದೆ. ಅದಕ್ಕೆ ಹೋಲುವಂತೆ ವ್ಯಕ್ತಿಯೊಬ್ಬರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ (Viral Video) ಆಗುತ್ತಿದೆ. ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯು ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದಾರೆ. ಅಂಗವೈಕಲ್ಯತೆಯೂ ತನ್ನ ಕೆಲಸಕ್ಕೆ ಅಡ್ಡಿಯಲ್ಲ ಎಂಬಂತೆ ಸ್ಕೂಟರ್​ ಅನ್ನು ಸ್ವತಃ ಚಲಾಯಿಸುತ್ತ ಫುಡ್​ ಡೆಲಿವರಿ ಮಾಡಿತ್ತಿದ್ದಾರೆ.

ವೈರಲ್​ ವಿಡಿಯೋದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಫುಡ್​​ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಗೆ ಎರಡು ಕೈಗಳು ಇಲ್ಲದಿರುವುದನ್ನು ನೋಡಬಹುದು. ಅವರು ತನ್ನ ದ್ವಿಚಕ್ರ ವಾಹನವನ್ನು ಅತ್ಯಂತ ಆತ್ಮವಿಶ್ವಾಸದಿಂದ ಓಡಿಸುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಒಬ್ಬ ವ್ಯಕ್ತಿ, ಅಂಕಲ್​​ ನೀವು ಇದನ್ನು ಓಡಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆ ವ್ಯಕ್ತಿ ಸ್ಮೈಲ್​ ನೀಡಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ.

ಈ ವಿಡಿಯೋವನ್ನು ಇದುವರೆಗು 18 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಆ ವ್ಯಕ್ತಿಯ ಕೆಲಸಕ್ಕೆ ಹೊಗಳಿದ್ದಾರೆ. ಇವರು ಪರಿಸ್ಥಿತಿಯನ್ನು ದೂಷಿಸದ ನಿಜವಾದ ನಾಯಕ, ಕೆಲವರು ಎಲ್ಲವೂ ಸರಿಯಾಗಿದ್ದರೂ ಅಳುತ್ತಲೇ ಇರುತ್ತಾರೆ, ಅವರಿಗೆ ಸೆಲ್ಯೂಟ್, ಎಲ್ಲಾ ಕಷ್ಟಗಳನ್ನು ನಿವಾರಿಸುವ ಇವರನ್ನು ದೇವರು ಆಶೀರ್ವದಿಸಲಿ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net