

ನವದೆಹಲಿ: ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹಲವು ವಿಷಯಗಳು ವೈರಲ್ ಆಗುತ್ತಿರುತ್ತವೆ. ಕೆಲವೊಂದು ಮಾಹಿತಿ ನೀಡುವಂತವಾದರೆ ಮತ್ತೆ ಕೆಲವು ಅನವಶ್ಯಕ ಎನ್ನಿಸುತ್ತದೆ. ಇನ್ನೂ ಕೆಲವು ವಿಡಿಯೋದಲ್ಲಿನ ವಿಚಾರಗಳನ್ನು ನೋಡಿದರೆ ಸಾಕು ನಗುವನ್ನು ತಡೆಯಲಾಗುವುದಿಲ್ಲ, ಅಷ್ಟು ಫನ್ನಿಯಾಗಿರುತ್ತದೆ. ಅಂತಹದ್ದೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.(Viral Video)
ಈ ಇಂಟರ್ನೆಟ್ ಯುಗದಲ್ಲಿ ಪ್ರೀತಿ ಎಂಬುದು ಇವರಿಗೆ ಎಂದು ಸೀಮಿತವಾಗಿಲ್ಲ. ಯಾರು ಬೇಕಾದರೂ ಪ್ರೀತಿಸುತ್ತಾರೆ ಅಷ್ಟೇ ಬೇಗನೆ ಅವಾಯ್ಡ್ ಅಥವಾ ಬ್ಲಾಕ್ ಕೂಡ ಮಾಡುತ್ತಾರೆ. ಆದರೆ ಈ ವೈರಲ್ ವಿಡಿಯೋದಲ್ಲಿ ತೋರಿಸಿರುವಂತೆ ವಿಷಯವನ್ನು ಚಿಕ್ಕವಯಸ್ಸಿನ ಮಕ್ಕಳು ಮಾಡುತ್ತಾರೆ ಎಂದು ಹೇಳಲು ಆಗುವುದಿಲ್ಲ.
ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳತಿಯ ಮನವೊಲಿಸಲು ಅನೇಕ ಪೋಸ್ಟರ್ಗಳನ್ನು ರಸ್ತೆಯಲ್ಲಿ ಹಾಕಿದ್ದಾನೆ. ವಿಡಿಯೋ ಮಾಡುತ್ತಿರುವ ವ್ಯಕ್ತಿಯೂ ಅದನ್ನು ಓದಿ ಮೋಜು ಮಾಡುತ್ತಿರುವುದು ಕಂಡು ಬರುತ್ತದೆ. ಪ್ರತಿ ಹೋರ್ಡಿಂಗ್ನಲ್ಲಿಯೂ 'ಕ್ಷಮಿಸು ಬೇಬು' ಎಂದು ಬರೆಯಲಾಗಿದೆ. ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಇದನ್ನು ಮಾಡುತ್ತಾರೆ ಎಂದು ಹೇಳುವುದು ಕಷ್ಟ. ಗರ್ಲ್ಫ್ರೆಂಡ್ಗೆ ಕ್ಷಮಿಸು ಎಂದು ಹೇಳಲು ಹುಡುಗನೊಬ್ಬ ದಾರಿ ಮಧ್ಯದ ಡಿವೈಡರ್ ಮೇಲಿರುವ ಪಿಲ್ಲರ್ಗಳ ಮೇಲೆ ಹಲವು ಪೋಸ್ಟರ್ಗಳನ್ನು ಹಾಕಿದ್ದಾನೆ ಎಂಬುದು ಸ್ಪಷ್ಟವಾಗುತ್ತದೆ.
ಸುಮಾರು 33 ಸೆಕೆಂಡಗಳ ಈ ವಿಡಿಯೋವನ್ನು ಇದುವರೆಗೂ 89 ಸಾವಿರ ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ.ಹೋರ್ಡಿಂಗ್ ಹಾಕುವುದನ್ನು ನಿರ್ಬಂಧಿಸಲಾಗಿದೆ ಎಂದು ತೋರುತ್ತದೆ, ತೆಗೆದುಬಿಡು ಅಣ್ಣ ಬಾಬುಗಳೆಲ್ಲ ಸೇರಿ ಒಪ್ಪುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.(ಏಜೆನ್ಸೀಸ್)