ಮೊಸಳೆ & ಹೆಬ್ಬಾವಿನ ಫೈಟ್​​; Viral Video ನೋಡಿದ್ರೆ ಗೂಸ್ಬಂಪ್ಸ್ ಬರೋದು ಗ್ಯಾರಂಟಿ

Untitled design - 2024-10-28T182807.131
Published on

ಮೊಸಳೆ ಭಯಂಕರ ಬೇಟೆಗಾರ ಎಂಬುದು ಗೊತ್ತಿದೆ. ಅದರ ದವಡೆಗಳಲ್ಲಿ ಎಷ್ಟು ಶಕ್ತಿ ಇದೆ ಎಂದರೆ ಆಮೆಯ ಚಿಪ್ಪನ್ನು ಸಹ ಛಿದ್ರಗೊಳಿಸಬಲ್ಲವು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮೊಸಳೆ ಮತ್ತು ಹೆಬ್ಬಾವಿನ ನಡುವಿನ ಕಾಳಗದ ವಿಡಿಯೋವೊಂದು ವೈರಲ್(Viral Video)​ ಆಗುತ್ತಿದೆ. ಸಾಕಷ್ಟು ಮಂದಿ ನೆಟ್ಟಿಗರು ವಿಡಿಯೋ ನೋಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ವೈರಲ್​ ವಿಡಿಯೋದಲ್ಲಿ ಹೆಬ್ಬಾವನ್ನು ಮೊಸಳೆ ಅದರ ದವಡೆಯಲ್ಲಿ ಹಿಡಿದಿರುವುದು ಮಾತ್ರವಲ್ಲದೆ ಹಿಂಸಾತ್ಮಕವಾಗಿ ಅಲುಗಾಡಿಸುವುದುನ್ನು ನೋಡಬಹುದು. ಹೆಬ್ಬಾವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸುತ್ತದೆ. ಆದರೆ ಮೊಸಳೆಯ ದವಡೆಯಿಂದ ತನ್ನನ್ನು ಬಿಡಿಸಿಕೊಳ್ಳುವಲ್ಲಿ ವಿಫಲವಾಗುತ್ತದೆ. ವಿಡಿಯೋ ಕೊನೆವರೆಗೂ ಹೆಬ್ಬಾವು ತನ್ನ ಪ್ರಯತ್ನ ಮಾಡುತ್ತಿದ್ದರೆ, ಮೊಸಳೆ ಅಷ್ಟೇ ಬಿಗಿಯಾಗಿ ಹಿಡಿದಿಟ್ಟುಕೊಂಡಿರುವುದನ್ನು ನೋಡಬಹುದು.

ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಕ್ರೇಜ್​ ಹುಟ್ಟುಹಾಕಿದೆ. ಇದುವರೆಗೂ ಈ ಪೋಸ್ಟ್​ ಅನ್ನು 13.5 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ, 62 ಸಾವಿರ ಮಂದಿ ಲೈಕ್​ ಮಾಡಿದ್ದಾರೆ. ಹಲವರು ಪ್ರತಿಕ್ರಿಯಿಸಿದ್ದಾರೆ. ಘೋರ ಕಾಳಗ , ಭಯಾನಕ ಫೈಟ್​​, ಮನೆಯ ಹಿತ್ತಲಿನಲ್ಲಿ ಮೊಸಳೆ ಮತ್ತು ಹೆಬ್ಬಾವು ಎಲ್ಲಿಂದ ಬಂದವು, ಮೊಸಳೆಯ ಶಕ್ತಿಗೆ ಸಾಟಿಯಿಲ್ಲ, ಮೊಸಳೆ ದವಡೆಯಿಂದ ತಪ್ಪಿಸಿಕೊಳ್ಳುವುದು ಕಷ್ಟ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net