Viral Video | ಮರಿ ರಕ್ಷಣೆಗಾಗಿ ಹುಲಿ ಜತೆ ಕರಡಿ ಕಾದಾಟ; ಫೈಟ್​ನಲ್ಲಿ ಗೆದ್ದವರು ಯಾರು?

Untitled-design-2024-09-29T170119.824
Published on

ಮುಂಬೈ: ಮನುಷ್ಯರಾಗಿರಲಿ ಅಥವಾ ಪ್ರಾಣಿಯಾಗಿರಲಿ, ನಿಮ್ಮ ಮಗುವಿನ ಮುಂದೆ ಯಾರಿದ್ದಾರೆ ಎಂಬುದು ಮುಖ್ಯವಾಗುವುದಿಲ್ಲ. ಅಪಾಯದಿಂದ ಮಗುವನ್ನು ರಕ್ಷಿಸಿದ್ದೇವೆ ಎಂಬುದಷ್ಟೆ ಮುಖ್ಯವಾಗುತ್ತದೆ. ಅಂತಹದ್ದೇ ಸಂದರ್ಭದಲ್ಲಿ ಕರಡಿಯೊಂದ ತನ್ನ ಮರಿಯನ್ನು ರಕ್ಷಿಸುವ ಸಲುವಾಗಿ ಹುಲಿಯೊಂದಿಗೆ ಹೋರಾಟ ನಡೆಸುವ ವಿಡಿಯೋವೊಂದ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವೈರಲ್​​ ವಿಡಿಯೋ(Viral Video) ಮಹಾರಾಷ್ಟ್ರದ ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದ್ದು ಎನ್ನಲಾಗಿದೆ.

ಅಂದ್ಹಾಗೆ ಹುಲಿ ತನ್ನ ಭೇಟೆಯನ್ನು ಸುಲಭವಾಗಿ ಬಿಡುವುದಿಲ್ಲ ಎಂದು ನಮ್ಮೆಲ್ಲರಿಗೂ ತಿಳಿದಿದೆ. ವೈರಲ್​ ವಿಡಿಯೋದಲ್ಲಿ ತಾಯಿ ಕರಡಿಯು ತನ್ನ ಮರಿಯನ್ನು ಕಾಪಾಡಲು ಹುಲಿ ವಿರುದ್ಧ ಹೋರಾಟ ನಡೆಸುವುದನ್ನು ನೋಡಬಹುದು. ಎಷ್ಟರ ಮಟ್ಟಿಗೆ ಎಂದರೆ ಹುಲಿಯೇ ಹೆದರಿ ಸ್ಥಳದಿಂದ ಓಡಿಹೋಗುವಂತೆ ಮಾಡುತ್ತದೆ. ಆದರೆ ಇದು ಅಷ್ಟು ಸುಲಭವಲ್ಲ, ಏಕೆಂದರೆ ಹುಲಿ ತನ್ನ ಬೇಟೆಯನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಆದರೆ ತನ್ನ ಮಗುವಿನ ವಿಷಯಕ್ಕೆ ಬಂದಾಗ ಕರಡಿ ಹುಲಿಗೆ ಟಫ್ ಫೈಟ್ ಕೊಟ್ಟು ಹುಲಿಯನ್ನೇ ಹೆದರಿಸಿ ಓಡಿಸಿದೆ. ಅಲ್ಲದೆ ಹುಲಿ ಸ್ಥಳದಿಂದ ಕಾಲ್ಕಿತ್ತರು ಬಿಡದೆ ಹಿಂಬಾಲಿಸಿ ಮತ್ತೊಮ್ಮೆ ಕರಡಿ ಅಟ್ಯಾಕ್​ ಮಾಡಲು ಪ್ರಯತ್ನಿಸುತ್ತದೆ. ವಿಡಿಯೋದಲ್ಲಿ ಮರಿ ಕರಡಿ ತನ್ನ ತಾಯಿಯ ಹಿಂದೆ ಅಡಗಿಕೊಂಡಿರುವುದು ಕಾಣಬಹುದು.

18 ಸೆಕೆಂಡ್ ಇರುವ ವಿಡಿಯೋ ವೈರಲ್​ ಆಗುತ್ತಿದ್ದಂತೆ ಇದುವರೆಗೆ 2.5 ಲಕ್ಷಕ್ಕೂ ಹೆಚ್ಚು ವೀಕ್ಷಿಸಿದ್ದಾರೆ. 11.5 ಸಾವಿರ ಮಂದಿ ಲೈಕ್​ ಮಾಡಿದ್ದಾರೆ. ನೂರಾರು ಮಂದಿ ಕಾಮೆಂಟ್​ ಮಾಡಿದ್ದಾರೆ. ಪ್ರಾಣಿಗಳ ಸಾಮ್ರಾಜ್ಯದಲ್ಲೆ ನನ್ನ ನೆಚ್ಚಿನ ಫೈಟ್​ ಇದು, ಎಂತಹ ಕ್ಷಣ, ತಾಯಿ ತನ್ನ ಮಗುವನ್ನು ಉಳಿಸಲು ಹೋರಾಡುತ್ತಾಳೆ. ಆಕೆಯೇ ದೇವರು, ವಿಡಿಯೋ ಚಿತ್ರೀಕರಿಸಿದವನಿಗೆ ಸಿಲ್ವರ್​​ ಸಿಕ್ಕಿರಬೇಕೆ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net