ದಾರಿಹೋಕ ವಾಹನ ಡಿಕ್ಕಿಯಿಂದ ಬಚಾವಾದ ಎದೆ ಝಲ್​ ಎನಿಸುವ ವಿಡಿಯೋ ವೈರಲ್​!

Accident
Published on

ಬೆಂಗಳೂರು: ದಾರಿಹೋಕನೊಬ್ಬ ಸಿನಿಮೀಯ ರೀತಿಯಲ್ಲಿ ವಾಹನ ಡಿಕ್ಕಿಯಿಂದ ಬಚಾವಾಗಿರುವ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ, ವೈರಲ್​ ಆಗಿರುವ ವಿಡಿಯೋ ಮಾತ್ರ ಎದೆ ಝಲ್​ ಎನಿಸುವಂತಿದೆ.

ವಿಡಿಯೋದಲ್ಲಿ ಏನಿದೆ?

ರಸ್ತೆ ಬದಿಯಲ್ಲಿ ದಾರಿಹೋಕ ಸುಮ್ಮನ್ನೆ ನಡೆದು ಹೋಗುವಾಗ ಎದುರಿಗೆ ಒಂದು ವಾಹನ ಬರುತ್ತಿರುತ್ತದೆ. ನೋಡ ನೋಡುತ್ತಿದ್ದಂತೆ ಹಿಂಬಂದಿಯಿಂದ ಬರುವ ವಾಹನ ದಾರಿಹೋಕ ಸಮೀಪವೇ ವೇಗವಾಗಿ ಚಲಿಸುತ್ತದೆ. ದಾರಿಹೋಕ ಎರಡು ವಾಹನಗಳ ಮಧ್ಯೆ ಪವಾಡವೆಂಬಂತೆ ಪಾರಾಗುತ್ತಾನೆ. ಕೊನೆಯಲ್ಲಿ ಬದುಕಿತು ಬಡಜೀವ ಎನ್ನವಂತೆ ಗಾಬರಿಯಿಂದ ನಿಟ್ಟುಸಿರುವ ಬಿಟ್ಟು ಹಿಂದಕ್ಕೆ ಓಡುತ್ತಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net