ಗಣೇಶ ಹಬ್ಬದಂದೇ ನಾಲ್ಕು ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣು

Suicide
Published on

ಭೋಪಾಲ್​: ನಾಲ್ಕು ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ಐವರು ಮೃತದೇಹ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾಗಿದ್ದು, ಗಣೇಶ ಹಬ್ಬದ ರಾತ್ರಿ ಮನೆಯವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದೆ.

ಈ ಘಟನೆ ಮಧ್ಯಪ್ರದೇಶದ ಖರ್ಗಪುರ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೀಡಾದವರನ್ನು ಧರ್ಮದಾಸ್ ಸೋನಿ (62), ಪುಣೆ ಸೋನಿ (55), ಮನೋಹರ್ ಸೋನಿ (27), ಸೋನಮ್ ಸೋನಿ (25) ಹಾಗೂ ನಾಲ್ಕು ವರ್ಷದ ಸಾನಿಧ್ ಎಂದು ಗುರುತಿಸಲಾಗಿದೆ. ಪಾದಗಳು ನೆಲಕ್ಕೆ ತಾಗಿರುವ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿರುವುದು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.

ಎಂದಿನಂತೆ ಇಂದೂ ಸಹ ಹಾಲು ಮಾರಾಟಗಾರ ಬೆಳಗಿನ ಜಾವ ಮೃತರ ಮನೆಯ ಬಳಿ ಬಂದು ಬಾಗಿಲು ತಟ್ಟಿದ್ದಾನೆ. ಅಲ್ಲದೆ, ಹಾಲು ತೆಗೆದುಕೋ ಬನ್ನಿ ಎಂದು ಜೋರಾಗಿ ಕೂಗಿದ್ದಾನೆ. ಆದರೆ ತುಂಬಾ ಹೊತ್ತಾದರೂ ಯಾರೂ ಬಾಗಿಲ ತೆರೆಯದ್ದನ್ನು ನೋಡಿ ಗಾಬರಿಗೊಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾನೆ.

ತಕ್ಷಣ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಮುರಿದು ನೋಡಿದಾಗ ಒಳಗಡೆ ಐದು ಮೃತದೇಹಗಳು ನೇತಾಡುತ್ತಿರುವುದನ್ನು ನೋಡಿದ್ದಾರೆ. ಈ ಘಟನೆಯಿಂದ ಅಕ್ಕಪಕ್ಕ ಜನರು ಗಾಬರಿಗೊಂಡಿದ್ದಾರೆ. ಆತ್ಮಹತ್ಯೆಯಾಗಿದ್ದಾರೆ ಅದಕ್ಕೆ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ ಅಥವಾ ಸಾವಿಗೆ ಬೇರೆ ಕಾರಣ ಇರಬಹುದೆಂಬ ಶಂಕೆಯು ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net