ಪ್ಯಾರಿಸ್ ಪ್ರವಾಸಕ್ಕಾಗಿ ಪಾಕಿಸ್ತಾನಿ ಏರ್‌ಲೈನ್ಸ್​​​ನಿಂದ ಜಾಹೀರಾತು; Viral Post ನೋಡಿ ಇದು ಬೆದರಿಕೆಯೇ ಎಂದ ನೆಟ್ಟಿಗರು

Untitled design - 2025-01-12T180917.436
Published on

ಇಸ್ಲಾಮಾಬಾದ್​​: ಭಾರತ ಸೇರಿ ವಿಶ್ವದ ಹಲವು ರಾಷ್ಟ್ರಗಳು ಪಾಕಿಸ್ತಾನವನ್ನು ಭಯೋತ್ಪಾದನೆಯ ಸ್ವರ್ಗ ಎಂದು ಪರಿಗಣಿಸಿವೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ನೆರೆಯ ದೇಶದ ನಾಯಕತ್ವವನ್ನು ಇಡೀ ವಿಶ್ವವೇ ಅನುಮಾನದಿಂದ ನೋಡುತ್ತಿದೆ. ಈ ಮಧ್ಯೆ ಪಾಕಿಸ್ತಾನದಕ ವಿಮಾನಯಾನ ಸಂಸ್ಥೆ ನೀಡಿರುವ ಜಾಹೀರಾತಿನ ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Post)​ ಆಗುತ್ತಿದೆ. ಪೋಸ್ಟ್ ನೋಡಿರುವ ಹಲವರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ವಾಸ್ತವವಾಗಿ ಪಾಕಿಸ್ತಾನದ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಯು ಪ್ಯಾರಿಸ್‌ಗೆ ತನ್ನ ಸೇವೆಗಳು ಪ್ರಾರಂಭವಾಗಲಿದೆ ಎಂದು ಜಾಹೀರಾತು ನೀಡಿತ್ತು. ಆದರೆ ಫೋಟೋದ ವಿನ್ಯಾಸವನ್ನು ನೋಡಿದ ನಂತರ ಕೆಲವು ಬಳಕೆದಾರರು ಈ ಜಾಹೀರಾತನ್ನು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ.

ವೈರಲ್​​ ಪೋಸ್ಟ್​​ನಲ್ಲಿ ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್​​ ಮಾಡಿರುವ ಜಾಹೀರಾತನ್ನು ನೋಡಬಹುದು. ಇದನ್ನು ನೋಡಿದವರಿಗೆ ಪ್ಯಾರಿಸ್‌ನ ಐಫೆಲ್ ಟವರ್‌ ಕಡೆಗೆ ವಿಮಾನ ಹೋಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಫೋಟೋ ಮೂಲಕ ಇಸ್ಲಾಮಾಬಾದ್ ಮತ್ತು ಪ್ಯಾರಿಸ್ ನಡುವಿನ ವಿಮಾನಗಳು ಜನವರಿ 10 ರಿಂದ ಪುನರಾರಂಭಗೊಳ್ಳಲಿವೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಈ ಜಾಹೀರಾತಿನ ಟ್ಯಾಗ್ ಲೈನ್​​ನಲ್ಲಿ 'ಪ್ಯಾರಿಸ್ ನಾವು ಬರುತ್ತಿದ್ದೇವೆ’ ಎಂದಿದೆ.

ಐಫೆಲ್ ಟವರ್ ಕಡೆಗೆ ಚಲಿಸುತ್ತಿರುವ ವಿಮಾನದ ಚಿತ್ರ ಮತ್ತು ಜಾಹೀರಾತಿನ ಶೀರ್ಷಿಕೆಯನ್ನು ನೋಡಿ ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ಪ್ರತಿಕ್ರಿಯೆಗಳು ಬರುತ್ತಿವೆ. ಇದು ಜಾಹೀರಾತು ಅಥವಾ ಬೆದರಿಕೆಯೇ?, ಬಾಸ್! ಇದನ್ನು ಅಳಿಸಿ, ನೀವು ಬಿನ್ ಲಾಡೆನ್ ಅನ್ನು ಪಾಕಿಸ್ತಾನದಿಂದ ಹೊರಗೆ ಕರೆದೊಯ್ಯಬಹುದು, ಪಾಕ್​​ ತನ್ನ ಉದ್ದೇಶವನ್ನು ಚಿತ್ರದ ಮೂಲಕ ನಿಮಗೆ ವ್ಯಕ್ತಪಡಿಸಿದೆ, ಪ್ಯಾರಿಸ್ ನಿಮಗೆ ಎಚ್ಚರಿಕೆ ನೀಡಲಾಗಿದೆ, ಇದು ಬೆದರಿಕೆ ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net