

ಕೆಲವೊಮ್ಮೆ ನಾವು ನಿರೀಕ್ಷಿಸಿರದ ಉಡುಗೊರೆಗಳು ದೊರೆತುಬಿಡುತ್ತವೆ. ಇಂಥ ಘಟನೆಯೊಂದು ಫಿಲಿಪ್ಪೀನ್ಸ್ನಲ್ಲಿ ನಡೆದಿದೆ. ಇದಕ್ಕೆ ಕಾರಣನಾದವನು ಮೊವೆರಿಕ್ ಫ್ರಾನ್ಸಿಸ್ ಎಂಬಾತ. ಸೋದರಿ ಲೂ ಆಸ್ಸೆಗೆ ತವರುಮನೆಯವರು ಹೊಸ ಗೌನ್ ಕೊಡಿಸಲು ಆಗಿರಲಿಲ್ಲ.
ಆದರೆ ಕೊಡಿಸಿಯೇ ತೀರಬೇಕೆಂಬ ಹಠಕ್ಕೆ ಬಿದ್ದ ಆತ ತಾನೇ ಅದನ್ನು ಸಿದ್ಧಪಡಿಸಿದ. ಪರಿಣತ ವಿನ್ಯಾಸಕರ ಸಲಹೆ ಪಡೆದು ಬಣ್ಣ ಹಾಕಿ ವಿನ್ಯಾಸ ತಯಾರಿಸಿದ. ಪ್ಲಾಸ್ಟಿಕ್ ಹೂವುಗಳನ್ನು ಅಳವಡಿಸಿ ಹಲವು ದಿನ ನಿದ್ರೆಯಿಲ್ಲದ ರಾತ್ರಿ ಕಳೆದು ಅಲಂಕೃತ ಗೌನ್ ತಯಾರಿಸಿ ಸೋದರಿಗೆ ನೀಡಿದ. ಇದರ ನಿರೀಕ್ಷೆಯೇ ಇಲ್ಲದ ಸೋದರಿ ಅಚ್ಚರಿಯ ಜತೆ ಬಹಳ ಸಂತೋಷಗೊಂಡಿದ್ದಾಳೆ.