

ಜಗತ್ತಿನ ನಾನಾ ಕಡೆಗಳಲ್ಲಿ ಸೌಂದರ್ಯಸ್ಪರ್ಧೆ, ಫ್ಯಾಶನ್ ಶೋಗಳನ್ನು ಆಯೋಜಿಸುವುದು ಸಾಮಾನ್ಯ. ಆದರೆ ನೇಪಾಳ ಪ್ರವಾಸೋದ್ಯಮ ಇಲಾಖೆಯು ಜಗತ್ತಿನಲ್ಲೇ ಅತ್ಯಂತ ಎತ್ತರದ ಪ್ರದೇಶವಾದ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ಗೆ ಸಮೀಪ 2020ರ ಜನವರಿ 26ರಂದು ಫ್ಯಾಶನ್ ಶೋ ಆಯೋಜಿಸಿತ್ತು.
ಎವರೆಸ್ಟ್ ಬಳಿ 5,340 ಮೀಟರ್ ಎತ್ತರದ ಕಾಲಾಪತ್ಥರ್ ಎಂಬ ಪ್ರದೇಶದಲ್ಲಿ ಈ ಫ್ಯಾಶನ್ ಶೋ ಜರುಗಿತು. ಈ ಶೋದಲ್ಲಿ ನೇಪಾಳ, ಸಿಂಗಪುರ, ಫಿನ್ಲೆಂಡ್, ಇಟಲಿ, ಶ್ರೀಲಂಕಾ ದೇಶಗಳ ರೂಪದರ್ಶಿಗಳು ಭಾಗವಹಿಸಿದ್ದರು. ಇದರಲ್ಲಿ ಬಳಸಲಾಗಿದ್ದ ಎಲ್ಲ ಬಟ್ಟೆಗಳನ್ನೂ ನೈಸರ್ಗಿಕವಾಗಿಯೇ ತಯಾರಿಸಲಾಗಿತ್ತು.
ಹವಾಮಾನ ಬದಲಾವಣೆಯ ಕುರಿತಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಫ್ಯಾಶನ್ ಶೋ ಆಯೋಜಿಸಿದ್ದಾಗಿ ನೇಪಾಳ ಸರ್ಕಾರ ಪ್ರಕಟಿಸಿದೆ.