ಬುಕ್ ಸ್ಟೋರ್​ನಲ್ಲಿ ಬೆಕ್ಕಿನ ಬಿಡಾರ

Bookstore Filled With Adorable Cats 2
Published on

ಸಾಮಾನ್ಯವಾಗಿ ಪುಸ್ತಕದ ಅಂಗಡಿಗಳಿಗೆ ಭೇಟಿ ನೀಡುವವರು ತಮ್ಮಿಷ್ಟದ ಲೇಖಕರ ಪುಸ್ತಕಗಳನ್ನು ಕೊಳ್ಳುತ್ತಾರಷ್ಟೆ. ಆದರೆ ಕೆನಡಾದ ಬುಕ್ ಸ್ಟೋರ್ ಈ ದಿಕ್ಕಿನಲ್ಲಿ ಹೊಸದೊಂದು ಹೆಜ್ಜೆ ಇಟ್ಟಿದೆ. ಓಟಿಸ್ ಮತ್ತು ಕ್ಲೆಮೆಂಟೃೆನ್ಸ್ ಬುಕ್ಸ್ ಆಂಡ್ ಕಾಫಿ ಎಂಬ ಈ ಸ್ಟೋರ್​ನಲ್ಲಿ ಬೀದಿಪಾಲಾದ ಬೆಕ್ಕಿನ ಮರಿಗಳಿಗೆ ತಾತ್ಕಾಲಿಕ ಆಶ್ರಯ ನೀಡಲಾಗುತ್ತದೆ. ಜತೆಗೆ ಅವುಗಳನ್ನು ದತ್ತು ತೆಗೆದುಕೊಳ್ಳಲು ಗ್ರಾಹಕರಿಗೆ ಪ್ರೋತ್ಸಾಹಿಸಲಾಗುತ್ತದೆ.

ಅನಾಥವಾಗಿ ಬೀದಿಗಳಲ್ಲಿರುವ ಬೆಕ್ಕಿನ ಮರಿಗಳನ್ನು ತಂದು ಸಾಕುವ ಈ ಸ್ಟೋರ್​ನ ಮಾಲಕಿ ಎಲೆನ್ ಹೆಲ್ಮ್​ಕೆ, ತಮ್ಮಲ್ಲಿಗೆ ಬರುವ ಓದುಗರು ಹಾಗೂ ಕಾಫಿಪ್ರಿಯರಿಗೆ ಈ ಬೆಕ್ಕಿನ ಮರಿಗಳನ್ನು ಪರಿಚಯಿಸಿ, ದತ್ತು ಪಡೆಯಲು ಪ್ರೇರೇಪಿಸುತ್ತಾರೆ. ಈಗಾಗಲೇ ಹೆಲೆನ್ ಮೂವತ್ತು ಬೆಕ್ಕಿನ ಮರಿಗಳಿಗೆ ಆಶ್ರಯ ಕೊಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net