ಶಿಕ್ಷಕರ ಕೊರತೆ ನೀಗಿಸಲು ಪ್ಯೂನ್ ನೆರವು

SCHOOL
Published on

ದೇಶದ ಎಷ್ಟೋ ಶಾಲೆಗಳಲ್ಲಿ ಈಗಲೂ ಅಗತ್ಯ ಪ್ರಮಾಣದಲ್ಲಿ ಶಿಕ್ಷಕರಿಲ್ಲ. ಇದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಯೂ ಕುಂಠಿತವಾಗುತ್ತಿದೆ. ಹರಿಯಾಣದ ಮಜ್ರಿ ಎಂಬಲ್ಲಿರುವ 400 ಮಕ್ಕಳ ಶಾಲೆಯೊಂದರಲ್ಲಿ 19 ಶಿಕ್ಷಕರಿದ್ದಾರೆ. ಮಕ್ಕಳಿಗೆ ಗಣಿತ ಹೇಳಿಕೊಡುವ ಶಿಕ್ಷಕರಲ್ಲಿ ಒಬ್ಬರು ಮಾತ್ರ ಸ್ನಾತಕೋತ್ತರ ಕೋರ್ಸ್ ಮುಗಿಸಿದ್ದಾರೆ.

ಹೀಗಾಗಿ ಶಿಕ್ಷಕರ ಕೊರತೆಯನ್ನು ತುಂಬಲು ಅಲ್ಲಿ ಪ್ಯೂನ್ ಕೆಲಸ ಮಾಡುತ್ತಿರುವ ಕಮಾಲ್ ಖಾನ್ ಮುಂದಾಗಿದ್ದಾರೆ. ಅವರು ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ ಪಾಠ ಮಾಡುವ ಮೂಲಕ ಒಬ್ಬರೇ ಗಣಿತ ಶಿಕ್ಷಕರ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತಿದ್ದಾರೆ.

ವಾರಕ್ಕೆ 17-18 ತರಗತಿಗಳನ್ನು ತೆಗೆದುಕೊಳ್ಳುವ ಅವರ ಪಾಠಗಳು ಮಕ್ಕಳಿಗೆ ಬಹಳ ಇಷ್ಟವಾಗಿವೆ. ಅಂದಹಾಗೆ ಕಮಾಲ್ ಭೌತಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿಯನ್ನು ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net