

ಸಾಮಾನ್ಯವಾಗಿ ಕಳ್ಳರ ಪಾಲಿಗೆ ಸುಲಭದ ಬೇಟೆ ಎಂದರೆ ಮಕ್ಕಳು, ಮಹಿಳೆಯರು ಹಾಗೂ ವಯೋವೃದ್ಧರೇ ಆಗಿರುತ್ತಾರೆ. ಆದರೆ ಇಲ್ಲೊಬ್ಬ ವೃದ್ಧ ಕಳ್ಳನೊಬ್ಬನ ಲೆಕ್ಕಾಚಾರವನ್ನು ಬುಡಮೇಲು ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ 77ವರ್ಷದ ವೃದ್ಧರೊಬ್ಬರು ಸೌತ್ವೇಲ್ಸ್ನ ಕಾರ್ಡಿಫ್ ನಗರದ ಎಟಿಎಂ ಒಂದರಲ್ಲಿ ಹಣ ತೆಗೆಯಲು ಹೋಗಿದ್ದರು. ಆ ಸಮಯಕ್ಕೆ ಅಲ್ಲಿಗೆ ಬಂದ ಕಳ್ಳನೊಬ್ಬ ಹಣ ಹಾಗೂ ಎಟಿಎಂ ಕಾರ್ಡ್ ಕೊಡಲು ಕೇಳಿದ. ತಕ್ಷಣ ಆ ವೃದ್ಧರು ಕಳ್ಳನಿಗೆ ಗುದ್ದಿ ಓಡಿಸಿದ್ದಾರೆ.
ಕಳ್ಳನನ್ನು ಹುಡುಕಾಟದಲ್ಲಿರುವ ಪೊಲೀಸರು ವೃದ್ಧರ ಸಾಹಸವನ್ನು ಹೊಗಳಿದ್ದಾರೆ. ಈ ಘಟನೆಯ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.