

ಸಾಮಾನ್ಯವಾಗಿ ಮೀನುಗಳು ನೀರಿನಲ್ಲಿಯೇ ಇರುತ್ತವೆ. ಆದರೆ ಮೀನೊಂದು ಗೋಡೆ ಏರುತ್ತಿರುವ ವಿಸ್ಮಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ನೀರಿನ ಹರಿವಿಗೆ ವಿರುದ್ಧವಾದ ದಿಕ್ಕಿನಲ್ಲಿ ಚಲಿಸುತ್ತಿದ್ದ ಮೀನೊಂದು ಗೋಡೆಯನ್ನು ಏರುತ್ತಿರುವ ದೃಶ್ಯವನ್ನು ಕಾಣಬಹುದು. ಮೊದಲಿಗೆ ಗೋಡೆಯ ಮೇಲೆ ಏರಲು ಹಿಡಿತ ಸಾಧಿಸುವ ಮೀನು, ಆ ಬಳಿಕ ನಿಧಾನವಾಗಿ ಗೋಡೆಯ ಮೇಲಕ್ಕೆ ಏರಲು ಯತ್ನಿಸುತ್ತದೆ. ಮೀನಿನ ಈ ವಿಭಿನ್ನ ಸಾಹಸವು ನೆಟ್ಟಿಗರ ಮನಸೆಳೆಯುತ್ತಿದೆ.