

ಪ್ರಾಣಿ-ಪಕ್ಷಿಗಳನ್ನು ಸಾಕದವರು ವಿರಳ. ಇನ್ನು ಹಲವರು ಅನಾಥ ಪ್ರಾಣಿಗಳನ್ನೂ ಕರೆತಂದು ಸಾಕುವುದುಂಟು. ಜಕಾರ್ತಾದ ಹೊರವಲಯದಲ್ಲಿರುವ ದಿತಾ ಅಗಸ್ಟಾ ಎಂಬ ಮಹಿಳೆ ಶೆಲ್ಟರ್ ನಿರ್ವಿುಸಿ, 250 ಅನಾಥ ಬೆಕ್ಕುಗಳನ್ನು ಸಾಕುತ್ತಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಬೆಕ್ಕುಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದ ಅವರು ತಮ್ಮ ಸುತ್ತಮುತ್ತಲಿನ ಅನಾಥ ಬೆಕ್ಕುಗಳಿಗೆಲ್ಲ ಆಶ್ರಯ ನೀಡಿದ್ದಾರೆ.
ಮೊದಲಿನ ಮನೆಯಲ್ಲಿ ಅಷ್ಟೊಂದು ಬೆಕ್ಕುಗಳನ್ನು ಇಟ್ಟುಕೊಳ್ಳಲು ಸಾಧ್ಯವಾಗದ್ದರಿಂದ ಜಕಾರ್ತಾದ ಹೊರವಲಯದಲ್ಲಿನ ದೊಡ್ಡ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಈ ಬೆಕ್ಕುಗಳಿಗೆ ಆಹಾರ, ಔಷಧ ಇತ್ಯಾದಿಗಳನ್ನು ಖರೀದಿಸಲೆಂದೇ ದಿನಕ್ಕೆ ಅವರು ಸಾವಿರಾರು ರೂ. ಖರ್ಚು ಮಾಡುತ್ತಿದ್ದಾರೆ.