ಉಡುಗೊರೆ ನೀಡಿದ ಬಿಲ್ ಗೇಟ್ಸ್

VIRAL
Published on

‘ಸೀಕ್ರೆಟ್ ಸಾಂತಾ ಆಡುವುದೆಂದರೆ ನನಗೆ ಬಹಳ ಇಷ್ಟ. ಆದರೆ ಇನ್ನು ಮುಂದೆ ನನಗೆ ಅದು ಇಷ್ಟವಾಗಲ್ಲ. ಪ್ರತಿ ಬಾರಿಯೂ ಸ್ನೇಹಿತರು ಒಳ್ಳೆಯ ಗಿಫ್ಟ್ ಕೊಡುವುದಿಲ್ಲ. ತಮಾಷೆಗಾಗಿ ಒಂದು ಬಾರ್ ಸೋಪ್ ಕೊಟ್ಟಿದ್ದೂ ಇದೆ’ ಎಂದು 33 ವರ್ಷದ ಶೆಲ್ಬೆ ಎಂಬ ಮಹಿಳೆ ಬೇಸರ ಪಟ್ಟುಕೊಂಡಿದ್ದಳು.

ರೆಡ್ಡಿಟ್ ಗಿಫ್ಟ್​ನಲ್ಲಿ ಇವರು ಭಾಗವಹಿಸಿದ್ದು, ಅಲ್ಲಿ ಇವರ ಹೆಸರು ಖ್ಯಾತ ಉದ್ಯಮಿ ಬಿಲ್ ಗೇಟ್ಸ್​ಗೆ ಬಂದಿತ್ತು. ಅವರು ಈ ಮಹಿಳೆಗೆ 37 ಕೆ.ಜಿ.ಯ ಉಡುಗೊರೆ ಕಳಿಸಿದ್ದಾರೆ. ಹ್ಯಾರಿ ಪಾಟರ್, ಸಾಂತಾ ಹ್ಯಾಟ್, ಹಾಗ್ವರ್ಡ್ ಕ್ಯಾಸ್ಟಲ್, ಎಂಬ್ರಾಯ್ಡರಿ ಆಗಿರುವ ಎಲ್.ಎಲ್.ಪಿನ್ ಜಾಕೆಟ್ ಸೇರಿದಂತೆ ಹಲವಾರು ಗಿಫ್ಟ್​ಗಳು ಅದರಲ್ಲಿವೆ. ಅಲ್ಲದೆ ಈಕೆಯ ತಾಯಿ ಕಳೆದ ವರ್ಷ ಮೃತಪಟ್ಟಿದ್ದರು. ಅವರ ಹೆಸರಿನಲ್ಲಿ ಅಮೆರಿಕನ್ ಹಾರ್ಟ್ ಅಸೋಸಿಯೇಷನ್​ಗೆ ದೇಣಿಗೆ ನೀಡಿರುವುದಾಗಿ ಗೇಟ್ಸ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net