

ಬೆಳೆಯುವ ಮಕ್ಕಳನ್ನು ಕಾದುಕೊಳ್ಳುವುದು ಸುಲಭದ ಕೆಲಸವಲ್ಲ. ಅದರಲ್ಲೂ ತಾಯಿಯರಿಗಿಂತ ತಂದೆಯಾದವರಿಗೆ ಇದು ಹೆಚ್ಚು ತಲೆಬಿಸಿಯ ಕೆಲಸ. ಅಮೆರಿಕದ ಕೊಲೊರಾಡೋದಲ್ಲಿ ಮೋನಿಕಾ ಎಂಬ ಮಹಿಳೆಯೊಬ್ಬರು ತರಕಾರಿ ತರಲು ಹೋಗಬೇಕಾದ ಕಾರಣ ತಮ್ಮ ನಾಲ್ಕು ಮಕ್ಕಳನ್ನು ಪತಿಯ ವಶಕ್ಕೆ ಒಪ್ಪಿಸಿ ಹೋದರು.
ಆ ಸಂದರ್ಭದಲ್ಲಿ ಮಕ್ಕಳ ಉಸ್ತುವಾರಿ ವಹಿಸಿಕೊಂಡ ಪತಿ ಮೈಕೆಲ್; ನಿದ್ರಾಭಂಗಿಯಲ್ಲಿರುವ ತನ್ನ ಚಿತ್ರವನ್ನು ಬಿಡಿಸುವಂತೆ ಹೇಳಿ, ಅವರು ಡ್ರಾಯಿಂಗ್ನಲ್ಲಿ ತಲ್ಲೀನರಾಗಿರುವಂತೆ ಮಾಡಿ, ತಾವು ಚೆನ್ನಾಗಿ ನಿದ್ದೆ ಮಾಡಿದರು. ಮರಳಿ ಬಂದ ಬಳಿಕ ಪತಿಯ ಈ ಉಪಾಯವನ್ನು ಕಂಡ ಮೋನಿಕಾ, ಪತಿ ಮಲಗಿರುವ ಹಾಗೂ ಮಕ್ಕಳು ಚಿತ್ರ ಬಿಡಿಸುತ್ತಿರುವ ಭಾವಚಿತ್ರವನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದು, ಇದು ವೈರಲ್ ಆಗಿದೆ.