ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತನ್ನ ಮರಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ತಾಯಿ ಶ್ವಾನ; ಮನಕಲುಕುವ Video Viral

Dog
Published on

ನವದೆಹಲಿ: ಮನಕಲುಕುವ ಘಟನೆಯೊಂದರಲ್ಲಿ ನಾಯಿಯೊಂದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತನ್ನ ಮರಿಯನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಬಾಯಿಯಲ್ಲಿ ಹೊತ್ತುಕೊಂಡು ಬಂದಿರುವ ಘಟನೆ ಟರ್ಕಿಯಲ್ಲಿ ನಡೆದಿದೆ. ಜನವರಿ 13ರಂದು ಟರ್ಕಿಯ ಬೇಲಿಕ್ಡುಜು ಆಲ್ಫಾ ಪಶು ವೈದ್ಯಕೀಯ ಚಿಕಿತ್ಸಾಲಯದಲ್ಲಿ ಈ ಘಟನೆ ನಡೆದಿದ್ದು, ತಾಯಿ ಶ್ವಾನದ ರೋದನೆ ಕಂಡು ನೆಟ್ಟಿಗರು ಮರುಗಿದ್ದಾರೆ. 

ವೈರಲ್​ ಆಗಿರುವ ವಿಡಿಯೋ (Video Viral)  ನೋಡುವುದಾದರೆ ಶ್ವಾನ ತನ್ನ ಮರಿಯನ್ನು ಬಾಯಿಯಲ್ಲಿ ಹೊತ್ತುಕೊಂಡು ಬಂದು ಅದನ್ನು ಆಸ್ಪತ್ರೆಯ ಬಾಗಿಲಲ್ಲಿ ಮಲಗಿಸುತ್ತದೆ. ಇದನ್ನು ನೋಡಿದ ಆಸ್ಪತ್ರೆ ಸಿಬ್ಬಂದಿ ಅದರ ಬಳಿ ಬಂದು ಪರಿಶೀಲಿಸಿದ್ದು, ಬಳಿಕ ಅದನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡುತ್ತಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಈ ಬಗ್ಗೆ ಮಾತನಾಡಿರುವ ವೈದ್ಯ ಬಟುರಾಲ್ಪ್ ಡೋಗನ್, ಮೊದಲಿಗೆ ನಾವು ಪರಿಸ್ಥಿತಿಯನ್ನು ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ನಾವು ಮರಿಯನ್ನು ಕೈಗೆತ್ತಿಕೊಂಡ ಅದರ ದೇಹ ತಣ್ಣಗಿತ್ತು ಮತ್ತು ಉಸಿರಾಟ ಕೂಡ ಮಾಡುತ್ತಿರಲಿಲ್ಲ. ಆದರೆ ಹೃದಯ ತುಂಬಾ ನಿಧಾನವಾಗಿ ಬಡಿದುಕೊಳ್ಳುತ್ತಿತ್ತು. ಚಿಕಿತ್ಸೆ ನೀಡಿ ಅದನ್ನು ಬದುಕಿಸಿದೆವು ಎಂದು ವೈದ್ಯ ಬಟುರಾಲ್ಪ್ ಡೋಗನ್ ತಿಳಿಸಿದ್ದಾರೆ. 

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು (Video Viral), ತಾಯಿ ಶ್ವಾನದ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್​ಗಳನ್ನು ಹಾಕುತ್ತಿದ್ದಾರೆ. ಅನೇಕರು ವೈದ್ಯರ ನಡೆಯನ್ನು ಶ್ಲಾಘಿಸಿದ್ದು, ನಾಯಿಮರಿಯನ್ನು ಆರೈಕೆ ಮಾಡುವಂತೆ ಮನವಿ ಮಾಡಿದ್ದಾರೆ. ತಾಯಿ-ಮಗುವಿನ ಈ ವಿಡಿಯೋ ಮನಮುಟ್ಟುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net