

ನವದೆಹಲಿ: ಕರೊನಾ ಭೀತಿಯಿಂದ ಇಡೀ ಭಾರತಕ್ಕೆ ಬೀಗಮುದ್ರೆ ಬೀಳಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋ ತುಣುಕು ಸುಳ್ಳೆಂದು ಕೇಂದ್ರ ಸರ್ಕಾರದ ಪ್ರೆಸ್ ಇನ್ಫರ್ಮೇಶನ್ ಬ್ಯೂರೋ(ಪಿಐಬಿ) ಖಚಿತಪಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಪಿಐಬಿ, ಇಡೀ ಭಾರತಕ್ಕೆ ಬೀಗಮುದ್ರೆ ಬೀಳಲಿದೆ ಎಂದು ವಾಟ್ಸ್ಆ್ಯಪ್ಗಳಲ್ಲಿ ಆಡಿಯೋ ತುಣುಕೊಂದು ಹರಿದಾಡುತ್ತಿದೆ. ಅದು ಸಂಪೂರ್ಣ ನಕಲಿಯಾಗಿದ್ದು, ಭಯಹುಟ್ಟಿಸುವ ಉದ್ದೇಶದಿಂದ ಹರಿಬಿಡಲಾಗಿದೆ ಎಂಬುದನ್ನು ಖಚಿತಪಡಿಸುತ್ತೇವೆ ಎಂದಿದೆ.
ಕೊನೆಯಲ್ಲಿ ಆಡಿಯೋ ತುಣುಕನ್ನು ಮತ್ತೊಬ್ಬರಿಗೆ ಫಾರ್ವರ್ಡ್ ಮಾಡಬೇಡಿ, ಇನ್ನೊಬ್ಬರಿಗೆ ಸಹಾಯ ಮಾಡಿದರೆ, ಅದು ನಮಗೆ ಒಳಿತಾಗುತ್ತದೆ ಎಂದು ಪಿಐಬಿ ತಿಳಿಸಿದೆ.
ಭಾರತದಲ್ಲಿ ಕೊರನಾ ಮಹಾಮಾರಿ ಭೀತಿಯನ್ನು ಸೃಷ್ಟಿಸಿದ್ದು, ಈಗಾಗಲೇ ಇಬ್ಬರನ್ನು ಬಲಿಪಡೆದುಕೊಂಡಿದೆ. ಸೋಂಕಿತರ ಸಂಖ್ಯೆ 110ಕ್ಕೇ ಏರಿದೆ. ಜಾಗತಿಕವಾಗಿ 6 ಸಾವಿರಕ್ಕೂ ಹೆಚ್ಚು ಮಂದಿ ಕರೊನಾ ವೈರಸ್ಗೆ ಬಲಿಯಾಗಿದ್ದಾರೆ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವದಂತಿಗಳು ಕೂಡ ಹರಿದಾಡುತ್ತಿದ್ದು, ಅವುಗಳಿಗೆ ಕಿವಿಗೊಡಬೇಡಿ ಎಂಬುದು ಸರ್ಕಾರ ಕಳಕಳಿಯಾಗಿದೆ. (ಏಜೆನ್ಸೀಸ್)