More

    ಕರೊನಾ ವೈರಸ್​ ಹುಟ್ಟಿದ್ದು ಎಲ್ಲಿ? Covid-19 ಹೆಸರು ಹೇಗೆ ಬಂತು ಗೊತ್ತಾ?

    ಬೆಂಗಳೂರು: ಕೇವಲ ಮೂರು ತಿಂಗಳ ಅವಧಿಯಲ್ಲಿ ಇಡೀ ಪ್ರಪಂಚವನ್ನೇ ಭಯಭೀತವಾಗಿಸಿದ್ದು ಕರೊನಾ ವೈರಸ್​. ಚೀನಾದ ಯಾವುದೋ ಮೂಲೆಯಲ್ಲಿ ಪತ್ತೆಯಾದ ಈ ವೈರಸ್​ ವಿಶ್ವವ್ಯಾಪಿಯಾಗಿ ಸಾವಿರಾರು ಜೀವಗಳನ್ನು ಬಲಿತೆಗೆದುಕೊಂಡುಬಿಟ್ಟಿದೆ. ಅಷ್ಟಕ್ಕೂ ಈ ವೈರಸ್​ ಹುಟ್ಟಿದ್ದು ಎಲ್ಲಿ? ಇದರ ಪರಿಣಾಮಗಳು ಹೇಗಿವೆ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

    ಕರೊನಾ ವೈರಸ್​ ಮೊದಲು ಪತ್ತೆಯಾದದ್ದು ಚೀನಾದ ವುಹಾನ್​ನಲ್ಲಿರುವ ಮಾಂಸದ ಮಾರುಕಟ್ಟೆಯಲ್ಲಿ. ಎಚ್​ಐವಿ, SARS, MERS ಗಳಂತೆಯೇ ಈ ವೈರಸ್​ ಕೂಡ ಕಾಡು ಪ್ರಾಣಿಗಳ ಮಾಂಸದಿಂದ ಹುಟ್ಟಿಕೊಂಡಿತು. ಅದರಲ್ಲಿಯೂ ಬಾವುಲಿಯ ಮಾಂಸದಲ್ಲೇ ಈ ವೈರಸ್​ ಸೃಷ್ಟಿಯಾಗಿದ್ದು ಎಂದು ಹೇಳಲಾಗಿದೆ. ವುಹಾನ್​ ಮಾಂಸದ ಮಾರುಕಟ್ಟೆಯಲ್ಲಿ ಮಾಂಸ ಮಾರುತ್ತಿದ್ದವನ / ಕೊಳ್ಳುತ್ತಿದ್ದವನ ದೇಹದಲ್ಲಿ ಮೊದಲು ಕಾಣಿಸಿಕೊಂಡ ಈ ವೈರಸ್​ ನಂತರ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಾ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿತು.

    ಮೊದಲಿಗೆ ಈ ವೈರಸ್​ಗೆ ಸೀವಿಯರ್​ ಅಕ್ಯೂಟ್​ ರೆಸ್ಪಿರೇಟರಿ ಸಿಂಡ್ರೋಮ್​ ಕರೊನಾವೈರಸ್​ 2 (SARS-CoV-2) ಎಂದು ಕರೆಯಲಾಗಿತ್ತು. ಆದರೆ SARS ಎಂದರೆ ಜನರಲ್ಲಿ ಭೀತಿ ಹೆಚ್ಚಾಗುತ್ತದೆ ಎನ್ನುವ ಕಾರಣದಿಂದ ಅದಕ್ಕೆ Covid-19 ಎನ್ನುವ ಹೆಸರನ್ನು ಸೂಚಿಸಲಾಯಿತು. ಈ ವೈರಸ್​ಗೆ ಟ್ಯಾಕ್ಸಾನಮಿ ಆಫ್​ ವೈರಸ್​ಗಳ ಅಂತಾರಾಷ್ಟ್ರೀಯ ಸಮಿತಿ (ICTV) ಹೆಸರಿಸಿದೆ.

    ಯಾರಿಗೆ ತೊಂದರೆ: ಈ ವೈರಸ್​ ಮನುಷ್ಯರಿಂದ ಮನುಷ್ಯರಿಗೆ ಹರಡಬಲ್ಲದ್ದು. ಹೃದಯದ ಕಾಯಿಲೆ, ಮಧುಮೇಹ, ಹೆಚ್ಚಿನ ಬಿಪಿ, ಕ್ಯಾನ್ಸರ್​ನಂತಹ ಕಾಯಿಲೆಗಳಿರುವ ವ್ಯಕ್ತಿಗಳ ಮೇಲೆ ಈ ವೈರಸ್​ ಹೆಚ್ಚಿನ ಪರಿಣಾಮ ಬೀರುತ್ತದೆ. ಇಂತಹ ಕಾಯಿಲೆ ಇರುವವರು ಈ ವೈರಸ್​ನಿಂದ ಸಾಯುವ ಅಪಾಯ ಹೆಚ್ಚಾಗಿದೆ.

    ಆರ್ಥಿಕತೆಗೆ ಪೆಟ್ಟು: ಕರೊನಾ ವೈರಸ್​ ಪ್ರಪಂಚದ ಅನೇಕ ದೇಶಗಳ ಆರ್ಥಿಕತೆಯ ಮೇಲೆ ಭಾರೀ ಪರಿಣಾಮವನ್ನು ಬೀರಿದೆ. ಬಹುತೇಕ ಏರ್​ಲೈನ್​ಗಳು ತಮ್ಮ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದ್ದು, ಇದರಿಂದಾಗಿ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ಅನೇಕ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ರಜೆ ಘೋಷಿಸಿವೆ. ಐಟಿ ಬಿಟಿ ಕಂಪನಿಗಳಲ್ಲಿ ಮನೆಯಿಂದಲೇ ಕೆಲಸ ಮಾಡುವಂತೆ ತಿಳಿಸಲಾಗುತ್ತಿದೆ. ಸಿನಿಮಾ ಚಿತ್ರಮಂದಿರಗಳು, ಮಾಲ್​ಗಳ ಬಾಗಿಲನ್ನು ಮುಚ್ಚಿಸಲಾಗಿದೆ. ಆ ಕಾರಣ ದೇಶ ವಿದೇಶಗಳಲ್ಲಿ ಈ ವೈರಸ್​ ಆರ್ಥಿಕವಾಗಿ ದುಷ್ಪರಿಣಾಮ ಬೀರುತ್ತಿದೆ.

    ಜಾಗತಿಕ ಮಟ್ಟದಲ್ಲಿ ಜನರಲ್ಲಿ ಈ ವೈರಸ್​ನ ಕುರಿತಾಗಿ ನಿರ್ಲಕ್ಷ್ಯತೆ ಹೆಚ್ಚಾಗಿರುವ ಕಾರಣ ಸೋಂಕನ್ನು ನಿಯಂತ್ರಣಕ್ಕೆ ತರುವುದು ಕಷ್ಟವಾಗುತ್ತಿದೆ. ಸತತ ಮೂರು ತಿಂಗಳ ವೈರಸ್​ನ ದಾಳಿಯನ್ನು ಎದುರಿಸಿದ ನಂತರ ಚೀನಾ ಕೊನೆಗೂ ಸುಧಾರಿಸಿದೆ. ಆದರೆ ಬೇರೆ ದೇಶಗಳಲ್ಲಿ ಕಳೆದ ಒಂದು ತಿಂಗಳಿನಿಂದ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು ಜನರು ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ. (ಏಜೆನ್ಸೀಸ್​)

    ಆತ್ಮವಿಶ್ವಾಸದೊಂದಿಗೆ ಪರೀಕ್ಷೆ ಬರೆಯಿರಿ: ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಸಚಿವ ಸುರೇಶ್​ ಕುಮಾರ್​

    ಯೆಸ್​ ಬ್ಯಾಂಕ್​ ಪ್ರಕರಣದಲ್ಲಿ ಉದ್ಯಮಿ ಅನಿಲ್​ ಅಂಬಾನಿಗೆ ಸಂಕಷ್ಟ: ವಿಚಾರಣೆಗೆ ಬರುವಂತೆ ಇಡಿ ಸಮನ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts