

‘ಕಾವೇರಿ’ ತಂತ್ರಾಂಶ ಮತ್ತು ‘ಇ ಸ್ವತ್ತು’ ಜೋಡಣೆ ಮಾಡಿ ಅದರ ಪ್ರಕಾರ ನಿವೇಶನ ನೋಂದಣಿ ಪ್ರಕ್ರಿಯೆ ನಡೆಸುವ ಸರ್ಕಾರದ ತೀರ್ವನಕ್ಕೆ ಕಾನೂನು ತಿದ್ದಪಡಿ ಅತ್ಯಗತ್ಯ. ಈ ಕೆಲಸ ಆಗಿಲ್ಲ ಎಂಬುದನ್ನು ಹೈಕೋರ್ಟ್ ಒಂದೂವರೆ ವರ್ಷದ ಹಿಂದೆಯೇ ಗಮನಿಸಿದೆ. ಅಲ್ಲದೆ 2020ರ ಜನವರಿಯೊಳಗೆ ಕಾನೂನು ತಿದ್ದುಪಡಿ ಮಾಡುವಂತೆಯೂ ಸ್ಪಷ್ಟ ಸೂಚನೆ ನೀಡಿದೆ. ಆದರೆ 2021ಕ್ಕೆ ದಿನಗಣನೆ ಆರಂಭವಾದರೂ ಸರ್ಕಾರ ಕಾನೂನಿನ ಚೌಕಟ್ಟಿನೊಳಗೆ ಈ ವ್ಯವಸ್ಥೆ ತರಲು ಮನಸ್ಸು ಮಾಡಿಲ್ಲ.
ಏಕೆ ಜೋಡಣೆ?: ಅತಿಯಾದ ನಗರೀಕರಣದಿಂದ ನಗರ ಪ್ರದೇಶಕ್ಕೆ ಹೊಂದಿಕೊಂಡ ಗ್ರಾಮೀಣ ಪ್ರದೇಶದಲ್ಲಿನ ಕೃಷಿ ಭೂಮಿ ನಿವೇಶನಗಳಾಗಿ ಪರಿವರ್ತನೆಯಾಗುವುದು, ಮನೆ ನಿರ್ವಣ, ವಾಣಿಜ್ಯ ಚಟುವಟಿಕೆ ಅಂಕೆಗೆ ಮೀರಿ ವೃದ್ಧಿಸುತ್ತಿದೆ. ಆದರೆ ಕೃಷಿ ಭೂಮಿ ಕೃಷಿಗೇ ಬಳಕೆಯಾಗಬೇಕೆಂಬುದು ಸರ್ಕಾರದ ಹಠ. ಈ ಕಾರಣಕ್ಕೆ ಹಸಿರು ವಲಯ ಗುರುತಿಸಿದೆ. ಇಷ್ಟರ ನಡುವೆಯೂ ನಿವೇಶನ ಮಾರಾಟ, ವಾಣಿಜ್ಯ ಚಟುವಟಿಕೆ ನಿಂತಿಲ್ಲ. ಇದನ್ನು ನಿಯಂತ್ರಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಸಂಗ್ರಹಿಸಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿ ಮಾಹಿತಿ ಮತ್ತು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಾವೇರಿ ತಂತ್ರಾಂಶದ ಮಾಹಿತಿ ಯನ್ನು ಜೋಡಣೆ ಮಾಡಿಯೇ ನೋಂದಣಿ ಮಾಡ ಲಾಗುತ್ತಿದೆ. ಹೈಕೋರ್ಟ್ ಈ ವಿಚಾರದಲ್ಲಿ ತನ್ನ ನಿಲುವು ಸ್ಪಷ್ಟಪಡಿಸಿ, ಕಾನೂನು ತಿದ್ದಪಡಿ ಆಗದ ಹೊರತು ನೋಂದಣಿ ನಿಲ್ಲಿಸ ಬಾರದೆಂದು ಸೂಚನೆ ನೀಡಿದೆ. ಆದರೂ ರಾಜಕೀಯ ನಾಯಕರು ಅಧಿಕಾರಿಗಳ ಮೇಲೆ ಒತ್ತಡ ತಂದು ನೋಂದಣಿ ಮಾಡದಂತೆ ತಡೆ ಹಾಕುತ್ತಿದ್ದಾರೆ. ಹಣ ವಸೂಲಿಗೂ ದಾರಿ ಮಾಡಿಕೊಂಡಿದ್ದಾರೆ. ಸಬ್ ರಿಜಿಸ್ಟ್ರಾರ್ಗಳನ್ನು ಅಮಾನತು ಮಾಡಿಸಲು ರಾಜಕೀಯ ಪ್ರಭಾವ ಬಳಸಿರುವುದು ಕಂಡುಬಂದಿದೆ.
ಸರ್ಕಾರದ ನಿಲುವೇ ಕಾನೂನುಬಾಹಿರ?: ನ್ಯಾಯಾಲಯದ ಆದೇಶ ಪ್ರಕಾರವೇ ನೋಡುವುದಾದರೆ, ಪ್ರಸ್ತುತ ಉಪನೋಂದಣಿ ಕಚೇರಿಗಳಲ್ಲಿ ಚಾಲನೆಯಲ್ಲಿರುವ ಕಾವೇರಿ ಇ-ಸ್ವತ್ತು ಸಂಯೋಜನೆ ಕಾನೂನು ಬಾಹಿರವಾಗಿದ್ದು, ನೋಂದಣಿ ಕಾಯ್ದೆಗೆ ಪೂರಕವಾಗಿಲ್ಲ ಎಂದು ಅಧಿಕಾರಿಗಳೇ ವಿಶ್ಲೇಷಿಸುತ್ತಾರೆ. ಇನ್ನೊಂದು ಪ್ರಕರಣದಲ್ಲಿ ನೋಂದಣಿ ಕಾಯ್ದೆಯಲ್ಲಿ ಉಪ ನೋಂದಣಾಧಿಕಾರಿಗೆ ಪ್ರದತ್ತವಾದ ವಿರುದ್ಧವಾಗಿ ಸುತ್ತೋಲೆ ನೀಡಬಾರದು ಎಂದು ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಇಷ್ಟರ ನಡುವೆಯೂ ಸಿಎಂ ಆಪ್ತರೊಬ್ಬರು, ನಿಗಮ ಮಂಡಳಿ ಅಧ್ಯಕ್ಷರೊಬ್ಬರು ಪ್ರಭಾವ ಬಳಸಿ ಅಧಿಕಾರಿಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕೆಂಬ ಉದ್ದೇಶದಿಂದ ಅಮಾನತು ಆದೇಶ ಹೊರಡಿಸುವಲ್ಲಿ ಸಫಲರಾಗಿದ್ದಾರೆ.
ಕೋರ್ಟ್ ಹೇಳಿದ್ದು..