ಸರ್ಕಾರಿ ಅಧಿಕಾರಿಗಳಿಂದಲೇ ಸರ್ಕಾರದ ಆದೇಶ ಉಲ್ಲಂಘನೆ!

gadag-minibus
Published on

ಗದಗ: ಸಾಮಾಜಿಕ ಅಂತರ ಕಾಪಾಡುವಂತೆ ತಿಳಿ ಹೇಳಬೇಕಾದ ಸರ್ಕಾರಿ ಅಧಿಕಾರಿಗಳೇ ಮಿನಿ ಬಸ್​ನಲ್ಲಿ ವಲಸೆ ಕಾರ್ಮಿಕರನ್ನು ಕುರಿಗಳಂತೆ ತುಂಬಿ ಸಾಗಿಸಿದ್ದಾರೆ.

ಕರೊನಾ ಆತಂಕ ಎಲ್ಲೆಡೆ ದಟ್ಟವಾಗಿದೆ. ಸೋಂಕು ಹರಡುವಿಕೆ ತಡೆಯಲು ಅನಿವಾರ್ಯ ಸಂದರ್ಭದಲ್ಲಿ ಹೊರಬಂದರೂ ದೈಹಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ವೈದ್ಯ ಲೋಕ ಹೇಳಿದೆ. ಸರ್ಕಾರ ಕೂಡ ಈ ನಿಟ್ಟಿನಲ್ಲಿ ಅಗತ್ಯ ಮಾರ್ಗಸೂಚಿ ಹೊರಡಿಸಿದ್ದು, ಸೋಂಕು ಮಣಿಸಲು ಹೋರಾಡುತ್ತಿದೆ. ಆದರೆ, ಇಲ್ಲಿನ ಕೆಲ ಸರ್ಕಾರಿ ಅಧಿಕಾರಿಗಳು ಮಾತ್ರ ನಿಯಮ ಪಾಲಿಸದೆ ನಿರ್ಲಕ್ಷಿಸಿದ್ದಾರೆ.

ಬಿಹಾರ ರಾಜ್ಯಕ್ಕೆ ಹೊರಟಿದ್ದ 180ಕ್ಕೂ ವಲಸೆ ಕಾರ್ಮಿಕರನ್ನು ಗದಗ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಮಿನಿ ಬಸ್​ಗಳಲ್ಲಿ ಬುಧವಾರ ಬೆಳಗ್ಗೆ ತಲುಪಿಸಲಾಗಿದೆ. ಅದೂ ಒಂದೇ ಸೀಟಿನಲ್ಲಿ ಇಬ್ಬಿಬ್ಬರನ್ನು ಕೂರಿಸಿ ರೈಲ್ವೆ ನಿಲ್ದಾಣಕ್ಕೆ ಅಧಿಕಾರಿಗಳು ಕಳಿಸಿದ್ದಾರೆ. ಇಲ್ಲಿ ಮಕ್ಕಳು, ಕಾರ್ಮಿಕರು ಎನ್ನದೇ ಎಲ್ಲರನ್ನೂ ಕುರಿದೊಡ್ಡಿಯಂತೆ ತುಂಬಲಾಗಿತ್ತು. ಕರೊನಾ ಸೋಂಕಿನ ವ್ಯಾಪ್ತಿ ಹೆಚ್ಚುತ್ತಿದ್ದರೂ ಜವಾಬ್ದಾರಿಯುತ ಅಧಿಕಾರಿಗಳೇ ಈ ರೀತಿ ವರ್ತಿಸಿದ್ದಕ್ಕೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net