ನೀತಿ ಸಂಹಿತೆ ಉಲ್ಲಂಘನೆ; ನಗದು ಸೇರಿ 195.84 ಕೋಟಿ ಮೊತ್ತದ ವಸ್ತು ವಶ

k54g681_eci_625x300_27_October_23.jpg
Published on

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಇದುವರೆಗೆ ಚುನಾವಣಾ ಆಯೋಗದ ವಿವಿಧ ತಂಡಗಳು ನಗದು, ಮದ್ಯ, ಮಾದಕ ವಸ್ತು, ಉಡುಗೊರೆ ಸೇರಿದಂತೆ 195.84 ಕೋಟಿ ರೂ. ಮೌಲ್ಯದ ವಸ್ತು ವಶಪಡಿಸಿಕೊಂಡಿವೆ. ನೀತಿ ಸಂಹಿತೆ ಜಾರಿಗೊಂಡ ಬಳಿಕ ಇದುವರೆಗೆ 34,59,21,477 ರೂ. ನಗದು, 1,79,83,744 ರೂ. ಬೆಲೆಯ ಉಚಿತ ಉಡೊಗೊರೆ, 11,10,67,652 ಇತರೆ ವಸ್ತು, 133,08,38,844 ರೂ. ಮೌಲ್ಯದ ಮದ್ಯ, 5,35,74,240 ರೂ. ಬೆಲೆಯ ಮಾದಕ ವಸ್ತು, 7,88,74,740 ರೂ. ಬೆಲೆ ಬಾಳುವ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net