ಎಸ್‌ಬಿಐ ಸಿಜಿಎಂ ಆಗಿ ವಿನೋದ್ ಜೈಸ್ವಾಲ್ ಅಧಿಕಾರ ಸ್ವೀಕಾರ

sbi vinod
Published on

ಬೆಂಗಳೂರು ಭಾರತೀಯ ಸ್ಟೇಟ್ ಬ್ಯಾಂಕ್‌ನ ಬೆಂಗಳೂರು ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕರಾಗಿ ವಿನೋದ್ ಜೈಸ್ವಾಲ್ ಅಧಿಕಾರ ವಹಿಸಿಕೊಂಡಿದ್ದಾರೆ.

ವಿನೋದ್ ಜೈಸ್ವಾಲ್ ಅವರು 1991ರಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ವೃತ್ತಿ ಜೀವನವನ್ನು ಆರಂಭಿಸಿದರು. ಕೋಲ್ಕತ್ತಾ ವೃತ್ತದಲ್ಲಿ ಉಪ ಪ್ರಧಾನ ವ್ಯವಸ್ಥಾಪಕ (ವ್ಯವಹಾರ ಹಾಗೂ ಕಾರ್ಯಾಚರಣೆ), ಪ್ರಧಾನ ವ್ಯವಸ್ಥಾಪಕ (ವಿತ್ತೀಯ ಸೇರ್ಪಡೆ ಹಾಗೂ ಮೈಕ್ರೋ ಮಾರ್ಕೆಟ್), ಚೆನ್ನೈ ವೃತ್ತದ ನೆಟ್‌ವರ್ಕ್-1ರ ಪ್ರಧಾನ ವ್ಯವಸ್ಥಾಪಕರಾಗಿ, ಚಂಡೀಗಢ ವೃತ್ತದ ಮತ್ತು ಪ್ರಧಾನ ವ್ಯವಸ್ಥಾಪಕರಾಗಿ ಹಲವಾರು ಪ್ರಮುಖ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net