ವಿನಾಯಕನ ಮೂರ್ತಿಗಳಿಗೆ ಕುಸಿದ ಬೇಡಿಕೆ: ಉತ್ತಮ ಆದಾಯ ನಿರೀಕ್ಷೆಯಲ್ಲಿದ್ದ ತಯಾರಕರಿಗೆ ನಿರಾಸೆ

Kailancha-Ph-0001-Ganesha Murthy Thayarike-Bannikuppe-22-8-2021
Published on

ಕೈಲಾಂಚ : ಗೌರಿಗಣೇಶ ಹಬ್ಬಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಕರೊನಾ ಹರಡುವಿಕೆ ಆತಂಕದಿಂದ ಸಾರ್ವಜನಿಕವಾಗಿ ವಿನಾಯಕನ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಈ ಬಾರಿಯಾದರೂ ಉತ್ತಮ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದ ಮೂರ್ತಿ ತಯಾರಕರಿಗೆ ನಿರಾಸೆ ಉಂಟಾಗಿದೆ.

ಕಳೆದ ವರ್ಷ ಗಣೇಶ ಹಬ್ಬಕ್ಕೆ ಸರ್ಕಾರ ನಿರ್ಬಂಧ ಹೇರಿದ್ದರಿಂದ ವಿನಾಯಕನ ಮೂರ್ತಿಗಳಿಗೆ ಬೇಡಿಕೆ ಇರಲಿಲ್ಲ. ಈ ಬಾರಿಯೂ ಮನೆಗಳಲ್ಲೇ ಹಬ್ಬ ಆಚರಿಸುವಂತೆ ಸರ್ಕಾರ ಸೂಚಿಸಿರುವುದರಿಂದ ಮೂರ್ತಿಗಳಿಗೆ ಬೇಡಿಕೆ ಕುಸಿದಿದೆ. ಹೀಗಾಗಿ ಮೂರ್ತಿ ತಯಾರಕರು ಆತಂಕಗೊಂಡಿದ್ದಾರೆ.

ಗಣೇಶ ಹಬ್ಬ ಮೂರ‌್ನಾಲ್ಕು ತಿಂಗಳು ಇರುವಾಗಲೇ ಅಕ್ಕಪಕ್ಕದ ಗ್ರಾಮಗಳು ಸೇರಿ ಜಿಲ್ಲೆಯ ನಾನಾ ಭಾಗಗಳಿಂದ ದೊಡ್ಡ ದೊಡ್ಡ ಗಣೇಶ ಮೂರ್ತಿಗಳಿಗೆ ಬೇಡಿಕೆ ಬರುತ್ತಿತ್ತು. ಈ ಭಾರಿ ಒಂದೇ ಒಂದು ಮೂರ್ತಿಗೂ ಬೇಡಿಕೆ ಬಂದಿಲ್ಲ. ನಮ್ಮಲ್ಲಿ ವಾಡಿದ ಮೂರ್ತಿಗಳನ್ನು ರಾಮನಗರ, ಚನ್ನಪಟ್ಟಣದಲ್ಲಿ ಹಬ್ಬದ ಒಂದೆರಡು ದಿನ ಮುಂಚಿತವಾಗಿ ವಾರಾಟ ವಾಡಲಾಗುತ್ತದೆ ಎನ್ನುತ್ತಾರೆ ಬಣ್ಣಿಕುಪ್ಪೆ ಗ್ರಾಮದ ಮೂರ್ತಿ ತಯಾರಕಿ ಯಶೋಧಮ್ಮ.

ಆಕರ್ಷಕ ಮೂರ್ತಿಗಳಿಗೆ ಬಣ್ಣಿಕುಪ್ಪೆ ಖ್ಯಾತಿ : ರಾಮನಗರ ತಾಲೂಕಿನ ಬನ್ನಿಕುಪ್ಪೆ ಗ್ರಾಮ ಪರಿಸರಸ್ನೇಹಿ ಜೇಡಿ ಮಣ್ಣಿನ ಗಣಪ ಮೂರ್ತಿಗಳ ತಯಾರಿಕೆಗೆ ಖ್ಯಾತಿಯಾಗಿದೆ. ಗ್ರಾಮದ ಏಳೆಂಟು ಕುಟುಂಬಗಳು ಬಹು ಹಿಂದಿನ ಕಾಲದಿಂದಲೂ ಮಡಕೆ, ಕುಡಿಕೆ, ಮನೆಯ ಹೆಂಚು, ಮುಂತಾದ ಮಣ್ಣಿನ ಪರಿಕರ ತಯಾರಿಕೆಯಲ್ಲಿ ಜೀವನ ಕಂಡುಕೊಂಡಿದ್ದಾರೆ. ಇವರು ವ್ಯಾಪಾರದ ಜತೆಗೆ ಗಣೇಶ ಹಬ್ಬಕ್ಕೆ ಜೇಡಿ ಮಣ್ಣಿನ ಗಣೇಶಮೂರ್ತಿಗಳನ್ನು ವಾಡಿ ವಾರಾಟ ವಾಡುವುದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಜೇಡಿ ಮಣ್ಣಿನಿಂದ ವಿವಿಧ ಆಕಾರಗಳಲ್ಲಿ ನಂದಿ, ನಾಗರ ಹಾವು, ಲಿಂಗ, ಈಶ್ವರ, ನವಿಲು, ಮೂಷಿಕ, ಸಿಂಹ, ಕಮಲ, ಏಳುತಲೆ ಸರ್ಪ, ಗಿಣಿ ಹೀಗೆ ವಿವಿಧ ಭಂಗಿಯ ಹಲವಾರು ಭಿನ್ನತೆಯಲ್ಲಿ ಗಣೇಶಮೂರ್ತಿಗಳು ಇವರ ಕೈಚಳಕದಲ್ಲಿ ತಯಾರಾಗುತ್ತಿವೆ.

ಕಳೆದ ವರ್ಷ ಆದ ವ್ಯಾಪಾರ ನಷ್ಟದಿಂದ ಈ ಬಾರಿ ನಾವು ದೊಡ್ಡ ಗಣೇಶ ಮೂರ್ತಿಗಳ ತಯಾರಿಕೆ ವಾಡಿಲ್ಲ. ಹಾಕಿದ ಬಂಡವಾಳ ಕೈಸೇರಲಿ, ಕರೊನಾ ಸಂಕಷ್ಟದ ಸಮಯದಲ್ಲಿ ಜೀವನ ನಿರ್ವಹಣೆಗೆ ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಚಿಕ್ಕ ಚಿಕ್ಕ ಸಾಂಪ್ರಾದಾಯಿಕ ಗಣೇಶ ಮೂರ್ತಿಗಳ ತಯಾರಿಕೆಗಷ್ಟೇ ಒತ್ತು ನೀಡಿದ್ದೇವೆ. ರಾಮಮೂರ್ತಿ, ಗಣೇಶಮೂರ್ತಿ ತಯಾರಕ ಬನ್ನಿಕುಪ್ಪೆ. ಗಣೇಶೋತ್ಸವಕ್ಕೆ ನಿರ್ಭಂಧ ಹೇರಿರುವುದರಿಂದ ಕುಂಬಾರ ಕುಟುಂಬಗಳಿಗೆ ಬಹಳಷ್ಟು ಕಷ್ಟವಾಗಲಿದೆ. ಇಂತಹ ಸಮಯದಲ್ಲಿ ಸರ್ಕಾರ ಆರ್ಥಿಕ ಸಹಾಯಕ್ಕೆ ಮುಂದಾಗಬೇಕು. ಈ ಹಿಂದೆ ಸರ್ಕಾರ ಕುಂಬಾರಿಕೆ ಕುಟುಂಬಗಳಿಗೆ 3 ಸಾವಿರ ರೂಪಾಯಿ ಸಹಾಯಧನ ನೀಡುವ ಭರವಸೆ ನೀಡಿತ್ತು. ಆದರೆ ಇದುವರೆವಿಗೂ ಸಹಾಯಧನ ನಮ್ಮ ಕೈ ಸೇರಿಲ್ಲ. ಆನಂದ್, ಗಣೇಶಮೂರ್ತಿ ತಯಾರಕ, ಬನ್ನಿಕುಪ್ಪೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net