ಚೆಂಡು ಹೂವು ಬೆಳೆ ಕಿತ್ತು ನಾಶಪಡಿಸಿದ ದುರುಳರು

amerahalli
ಚೆಂಡು ಹೂವು ಬೆಳೆಯನ್ನು ಕಿಡಿಗೇಡಿಗಳು ನಾಶಮಾಡಿರುವುದು.
Published on

ಕೋಲಾರ: ಸಮೃದ್ಧವಾಗಿ ಸಲು ಬಿಟ್ಟಿದ್ದ ಚೆಂಡು ಹೂವು ಬೆಳೆಯನ್ನು ಮಂಗಳವಾರ ದುಷ್ಕರ್ಮಿಗಳು ನಾಶಪಡಿಸಿದ್ದಾರೆ.

ತಾಲೂಕಿನ ಅಮ್ಮೇರಹಳ್ಳಿಯ ಮುನಿಯಮ್ಮ ಅವರು ಭೋಗ್ಯಕ್ಕೆ ಪಡೆದಿದ್ದ 1 ಎಕರೆ ಜಮೀನಿನಲ್ಲಿ 20 ಗುಂಟೆಯಲ್ಲಿ ಚೆಂಡು ಹೂವು ಹಾಗೂ ಬಾಕಿ ಜಮೀನಿನಲ್ಲಿ ಸೌತೆಕಾಯಿ ಬೆಳೆ ನಾಟಿ ಮಾಡಿದ್ದರು. ಚೆಂಡು ಹೂವು ಬೆಳೆ ಉತ್ತಮ ಇಳುವರಿ ಬಂದಿತ್ತು. ಮಂಗಳವಾರ ಹೂವು ಕಟಾವಿಗೆ ತೀರ್ಮಾನಿಸಿದ್ದರೂ ಕಾರಣಾಂತರಗಳಿಂದ ಬುಧವಾರ ಕಟಾವು ಮಾಡಿದರೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ ಎಂದು ಮಂಗಳವಾರ ರಾತ್ರಿ 8.30ರ ಸುಮಾರಿಗೆ ಮುನಿಯಮ್ಮ ಅವರ ಪುತ್ರ ತೋಟಕ್ಕೆ ನೀರು ಹಾಯಿಸಿ ಮನೆಗೆ ತೆರಳಿದ್ದರು. ಆದರೆ ತಡರಾತ್ರಿ ಕಿಡಿಗೇಡಿಗಳು ಹೂವು ಗಿಡಗಳನ್ನು ಕತ್ತರಿಸಿದ್ದಾರೆ. ಬುಧವಾರ ಬೆಳಗ್ಗೆ ಹೂವು ಕಟಾವಿಗೆಂದು ಮಾಲೀಕರು ತೋಟಕ್ಕೆ ಬಂದಾಗ ಬೆಳೆ ನಾಶವಾಗಿರುವುದು ಬೆಳಕಿಗೆ ಬಂದಿದೆ. ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net