ಅರಕಲಗೂಡು: ತಾಲೂಕಿನ ಇಲ್ಲಹಳ್ಳಿ ಕೆರೆಯಲ್ಲಿ ಸೋಮವಾರ ಮೀನು ಬೇಟೆಯಾಡಲು ಜನತೆ ಮುಗಿಬಿದ್ದ ದೃಶ್ಯ ಕಂಡುಬಂತು.
ಯುಗಾದಿ ಹೊಸತೊಡಕು ಹಿನ್ನೆಲೆಯಲ್ಲಿ ಕೆರೆಯಲ್ಲಿ ಮೀನು ಶಿಕಾರಿ ನಡೆಯಿತು. ಎದೆಯುದ್ದದ ನೀರಿಗಿಳಿದು ಬಲೆ ಬೀಸಿ ರಾಶಿಗಟ್ಟಲೇ ಮೀನು ಬೇಟೆಯಾಡಿದರು. ನೀರಿಗಿಳಿದ ಮಕ್ಕಳೂ ಮೀನಿಗಾಗಿ ಕಾತುರದಿಂದ ತಡಕಾಟ ನಡೆಸಿದರು.
ಅರಕಲಗೂಡು ತಾಲೂಕಿನ ಇಲ್ಲಹಳ್ಳಿ ಕೆರೆಯಲ್ಲಿ ಸೋಮವಾರ ಯುಗಾದಿ ಹೊಸತೊಡಕು ಹಿನ್ನೆಲೆಯಲ್ಲಿ ಗ್ರಾಮಸ್ಥರು ಮೀನು ಬೇಟೆಯಾಡಿದರು.