ಚುನಾವಣೆ ಪ್ರಚಾರಕ್ಕೆ ಬಂದ ಶಾಸಕರ ಚಳಿ ಬಿಡಿಸಿದ ಗ್ರಾಮಸ್ಥರು!

mla
Published on

ಬೆಳಗಾವಿ: ಚುನಾವಣೆ ಬಂದಾಗ ಮನೆ ಬಳಿ ಬಂದು ಅಣ್ಣಾ -ಅಕ್ಕಾ ಎಂದು ನಾಯಕರು ಮತ ಭಿಕ್ಷೆ ಕೇಳುತ್ತಾರೆ ಎನ್ನುವ ಮಾತು ತುಂಬಾ ಹಳೆಯದು. ಆದರೆ ಅದೇ ರೀತಿ ಶಾಸಕರೊಬ್ಬರು ಚುನಾವಣಾ ಪ್ರಚಾರಕ್ಕೆ ಎಂದು ಈ ಗ್ರಾಮಕ್ಕೆ ಹೋದಾಗ ಅಲ್ಲಿನ ಜನ ತರಾಟೆಗೆ ತೆಗೆದುಕೊಂಡು ಪ್ರಶ್ನೆ ಕೇಳಿಯೇ ಬೆವರಿಳಿಸಿದ್ದಾರೆ.

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಅನೀಲ ಬೆನಕೆ, ಚುನಾವಣಾ ಪ್ರಚಾರಕ್ಕೆಂದು ಬಸವನಕುಡಚಿ ಗ್ರಾಮಕ್ಕೆ ಆಗಮಿಸಿದ್ದರು. ಹಿಂದಿನಿಂದಲೂ ಶಾಸಕರ ಬಗ್ಗೆ ಅಸಮಾಧಾನ ಹೊಂದಿದ್ದ ಗ್ರಾಮಸ್ಥರು, ಇಂದು ಮಾತ್ರ ಇವರನ್ನು ಹಿಡಿದು ಹಾಕಲೇ ಬೇಕು ಎಂದು ನಿರ್ಧರಿಸಿ ತರಾಟೆಗೆ ತೆಗೆದುಕೊಂಡಿದ್ದಾರೋ ಏನೋ ಎಂದು ಅನಿಸುವಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ.

ಗ್ರಾಮಕ್ಕೆ ಬಂದ ಬಿಜೆಪಿ ಶಾಸಕರಿ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು ಚುನಾವಣೆ ಪ್ರಚಾರಕ್ಕೆ ಬಂದಾಗ ಚಳಿ ಬಿಡಿಸಿದ್ದಾರೆ. ಐದು ವರ್ಷದಲ್ಲಿ ಗ್ರಾಮಕ್ಕೆ ಮಾಡಿದ ಅಭಿವೃದ್ಧಿ ಕೆಲಸದ ಬಗ್ಗೆ ಜನರು ಪ್ರಶ್ನೆ ಮಾಡಿದ್ದು ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಶಾಸಕರು ಕಕ್ಕಾಬಿಕ್ಕಿಯಾಗಿದ್ದಾರೆ.

ಈ ಜನರ ಸಹವಾಸವೇ ಬೇಡಪ್ಪಾ ಎಂದುಕೊಂಡ ಶಾಸಕರು ಸುಳ್ಳು ಹೇಳಿ ಅಲ್ಲಿಂದ ಜಾರಿಕೊಳ್ಳಲು ಯತ್ನಿಸಿದಾಗ ಅವರನ್ನು ಸಾಕ್ಷಿ ಸಮೇತ ಹಿಡಿದ ಜನ ಚಳಿ ಬಿಡಿಸಿದ್ದಾರೆ.

ಚರಂಡಿ ನಿರ್ಮಾಣ, ಹೋಲಗಳಿಗೆ ಹೋಗುವ ರಸ್ತೆ ವಿಚಾರದಲ್ಲಿ ಆಗದೇ ಇರುವ ಕಾಮಗಾರಿ ಬಗ್ಗೆ ಜನರು ಪ್ರಶ್ನಿಸಿದ್ದು ಮೊಬೈಲ್​ನಲ್ಲಿ ರೆಕಾರ್ಡ್​ ಕೂಡ ಮಾಡಿದ್ದಾರೆ. ಇದೀಗ ಜನರು ಶಾಸಕರಿಗೆ ಛೀಮಾರಿ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net