ನಾವು ಹೇಳಿದಂತೆ ಮಾಡಿದ್ರೆ ಮಾತ್ರ ಕೆಳಗೆ ಇಳಿತೀವಿ! ನೀರಿನ ಟ್ಯಾಂಕ್ ಮೇಲತ್ತಿ ಗ್ರಾಮಸ್ಥರ ಪ್ರತಿಭಟನೆ

ವಿಜಯವಾಣಿ - 2024-11-17T203145.223
Published on

ತಮಿಳುನಾಡು: ಮಧುರೈ ವಿಮಾನ ನಿಲ್ದಾಣದ ವಿಸ್ತರಣೆಗೆ ಉದ್ದೇಶಿಸಿರುವ ಭೂಸ್ವಾಧೀನವನ್ನು ವಿರೋಧಿಸಿ ಮಧುರೈ ಜಿಲ್ಲೆಯ ಗ್ರಾಮಸ್ಥರು ಇಂದು ಬೃಹತ್​ ಪ್ರತಿಭಟನೆ ನಡೆಸಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಊರಿನವರು, ಈ ವಿಸ್ತರಣೆ ಬೇಡ, ಈ ಕೂಡಲೇ ಯೋಜನೆ ಕೈಬಿಡಿ ಎಂದು ಆಗ್ರಹಿಸಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಪ್ರತಿಭಟನಾ ಸ್ಥಳದಲ್ಲಿ ನಿಯೋಜಿಸಿದ ಪೊಲೀಸ್​ ಇಲಾಖೆ, ಪ್ರತಿಭಟನಾಕಾರರನ್ನು ತಡೆಯುವಂತೆ ತಿಳಿಸಿತು.

16 ಗ್ರಾಮಸ್ಥರು ನೀರಿನ ಟ್ಯಾಂಕ್ ಮೇಲೆ ಹತ್ತಿದ ನಂತರ ಈ ಪ್ರತಿಭಟನೆ ತೀವ್ರಗೊಂಡಿದೆ, ಪುನರ್ವಸತಿಗಾಗಿ ಸರ್ಕಾರವು ಪರ್ಯಾಯ ಭೂಮಿಯನ್ನು ನೀಡದಿದ್ದರೆ ಟ್ಯಾಂಕ್​ ಮೇಲಿನಿಂದ ಬಿದ್ದು ಸಾವಿಗೆ ಶರಣಾಗುತ್ತೀವಿ. ನಮ್ಮ ಜೀವಕ್ಕೆ ನೀವೇ ಹೊಣೆ ಎಂದು ಕೆಲವರು ಬೆದರಿಕೆ ಹಾಕಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿಗಳು ಸಂಧಾನಕ್ಕೆ ಯತ್ನಿಸಿದರೂ ಸಹ ಗ್ರಾಮಸ್ಥರು ಮಾತ್ರ ಪ್ರತಿಭಟನೆಯಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ.

ಘರ್ಷಣೆಯ ಸಮಯದಲ್ಲಿ, ನಿಶ್ಯಕ್ತಿಯಿಂದಾಗಿ ಮೂವರು ಮಹಿಳೆಯರು ನಿಂತಲ್ಲೇ ಕುಸಿದು ಬಿದ್ದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ಪ್ರತಿಭಟನಾಕಾರರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ನಂತರ ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಒಪ್ಪಿಕೊಂಡರೆ, ಗಮನಾರ್ಹ ಸಂಖ್ಯೆಯ ಗ್ರಾಮಸ್ಥರು ಪ್ರತಿರೋಧವನ್ನು ಮುಂದುವರೆಸಿದ್ದಾರೆ ಎನ್ನಲಾಗಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆಯಿಂದ ಅಂತರ ಕಾಯ್ದುಕೊಳ್ಳುವುದಾಗಿ ಶಪಥ ಮಾಡಿ ಬಯಲುಸೀಮೆಯಲ್ಲಿ ತಾತ್ಕಾಲಿಕ ಟೆಂಟ್‌ಗಳನ್ನು ಹಾಕಿಕೊಂಡಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net